Sunday, January 19, 2025
Sunday, January 19, 2025

ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷರಾಗಿ ಕೆ. ತಾರಾನಾಥ ಹೊಳ್ಳ ಪುನರಾಯ್ಕೆ

ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷರಾಗಿ ಕೆ. ತಾರಾನಾಥ ಹೊಳ್ಳ ಪುನರಾಯ್ಕೆ

Date:

ಕೋಟ, ಆ.7: ಗೆಳೆಯರ ಬಳಗ ಕಾರ್ಕಡ ಇದರ 36ನೇ ವಾರ್ಷಿಕ ಮಹಾಸಭೆಯು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಗದ ಅಧ್ಯಕ್ಷ ಕೆ ತಾರಾನಾಥ ಹೊಳ್ಳರ ಅಧ್ಯಕ್ಷತೆಯಲ್ಲಿ ಜರಗಿತು. ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಕೆ. ಶೀನ ಹಾಗೂ ಅಡಿಟ್ ವರದಿಯನ್ನು ಕೋಶಾಧಿಕಾರಿ ಕೆ. ನಾಗರಾಜ ಉಪಾಧ್ಯ ಸಭೆಯಲ್ಲಿ ಮಂಡಿಸಿದರು. ಕಾರ್ಯಕಾರಿಣಿ ಸಭೆಯಲ್ಲಿ ಪದಾಧಿಕಾರಿಗಳನ್ನು ಮುಂದಿನ ೩ ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೆಳೆಯರ ಬಳಗದ ಅಧ್ಯಕ್ಷರಾಗಿ ಕೆ. ತಾರಾನಾಥ ಹೊಳ್ಳ ಅವಿರೋಧವಾಗಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕೆ. ಶಶಿಧರ ಮಯ್ಯ, ಕಾರ್ಯದರ್ಶಿಯಾಗಿ ಕೆ. ಶೀನ, ಜೊತೆ ಕಾರ್ಯದರ್ಶಿಯಾಗಿ ಕೆ. ಶ್ರೀಕಾಂತ ಐತಾಳ, ಖಜಾಂಚಿ ನಾಗರಾಜ ಉಪಾಧ್ಯ, ಕಾರ್ಯಕಾರಿ ಸಮಿತಿಯ ಪ್ರಮುಖರಾಗಿ ಕೆ. ಚಂದ್ರಕಾಂತ ನಾಯರಿ, ಕೆ. ಜಗದೀಶ ಆಚಾರ್ಯ, ಕೆ. ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ.ಉದಯ ಐತಾಳ, ಕೆ. ರಾಘವೇಂದ್ರ ದೇವಾಡಿಗ, ಬಡಾಹೋಳಿ ಕೆ. ಶೇಖರ, ಕೆ. ರಘ ಭಂಡಾರಿ ಇವರುಗಳು ಆಯ್ಕೆಯಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!