ಕೋಟ, ಆ.7: ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಎಮ್ ಸಿ. ಚಂದ್ರಶೇಖರ್ ರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ರೆ. ಫಾ. ಸುನಿಲ್ ಡಿಸಿಲ್ವ, ಗೌರವ ಸಲಹೆಗಾರರಾಗಿ ಎ.ಪಿ ಮದ್ಯಸ್ಥ, ರಮೇಶ್, ಶೇಖರ್ ಪೂಜಾರಿ, ಸುಶೀಲ ಪೂಜಾರಿ, ಉಪಾಧ್ಯಕ್ಷರುಗಳಾಗಿ ನಾರಾಯಣ ಆಚಾರ್, ಲೀಲಾವತಿ ಗಂಗಾಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಿನಕರ್, ಜೊತೆ ಕಾರ್ಯದರ್ಶಿಯಾಗಿ ರಾಜೇಂದ್ರ ಪೂಜಾರಿ, ಕೋಶಾಧಿಕಾರಿ ವಿಶ್ವನಾಥ್ ಆಚಾರ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಕೃಷ್ಣ ಮಾಸ್ಟರ್ ಸ್ವಾಗತಿಸಿ, ಆಲ್ವಿನ್ ಅಂದ್ರಾದೆ ನಿರೂಪಿಸಿ ವಂದಿಸಿದರು.
ಪಾಂಡೇಶ್ವರ ಶಾಲೆ: ಶತಮಾನೋತ್ಸವ ಪೂರ್ವಭಾವಿ ಸಭೆ

ಪಾಂಡೇಶ್ವರ ಶಾಲೆ: ಶತಮಾನೋತ್ಸವ ಪೂರ್ವಭಾವಿ ಸಭೆ
Date: