Wednesday, February 26, 2025
Wednesday, February 26, 2025

ದೊಡ್ಡಣಗುಡ್ಡೆ- ವಿಶ್ವ ಮಹಿಳಾ ದಿನಾಚರಣೆ

ದೊಡ್ಡಣಗುಡ್ಡೆ- ವಿಶ್ವ ಮಹಿಳಾ ದಿನಾಚರಣೆ

Date:

ಉಡುಪಿ: ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ ನಿಯೋಜಿತ ಘಟಕಾಧ್ಯಕ್ಷರಾದ ಗಣೇಶ್ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ಹಾಗೂ ಲಯನ್ಸ್ ಕ್ಲಬ್ ಇದರಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ, ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಂತಹ ವತ್ಸಲಾ ಕರ್ಕೇರ ಇವರನ್ನು ಸನ್ಮಾನಿಸಲಾಯಿತು.

ಘಟಕದ ಉಪಾಧ್ಯಕ್ಷ ಜೈದೀಪ್ ಅವರು ಸನ್ಮಾನಿತರ ಕಿರು ಪರಿಚಯವನ್ನು ಮಾಡಿದರು. ಘಟಕದ ಸ್ಥಾಪಕಾಧ್ಯಕ್ಷರಾದ ಎಂ ಏನ್ ನಾಯಕ್ ಅವರು ಜೆಸಿ ಆಂದೋಲನವು ಒಂದು ಉತ್ತಮ ತರಬೇತಿಗಳ ಜೀವಾಳ ಹಾಗೂ ನಾಯಕತ್ವವನ್ನು ಒಗ್ಗೂಡಿಸಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಘಟಕದ ಕೋಶಾಧಿಕಾರಿ ಉಮೇಶ್ ಆಚಾರ್ಯ ಇವರು ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ ಇದನ್ನು ತಮ್ಮ ಕವನದ ಮೂಲಕ ತಿಳಿಯಪಡಿಸಿದರು. ಕಾರ್ಯದರ್ಶಿ ಗಣೇಶ್ ನಾಯ್ಕ್ ವಂದನಾರ್ಪಣೆಗೈದರು. ಘಟಕದ ಜೆಜೆಸಿ ಚೇರ್ ಪರ್ಸನ್ ಯಶವಂತ್, ವೀಣಾ ನಾಗೇಶ್, ಪಂಚಮಿ, ಹರೀಶ್ ಕುಂದರ್ ಮಸ್ಕತ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರೀಕ್ಷಾ ತರಬೇತಿ

ಕುಂದಾಪುರ, ಫೆ.26: ಜೆಸಿಐ ಶಂಕರನಾರಾಯಣ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ...

ಮಣಿಪಾಲ ಜ್ಞಾನಸುಧಾ: ಗಣಕ ವಿಜ್ಞಾನ ಉಪನ್ಯಾಸಕರ ಕಾರ್ಯಾಗಾರ

ಮಣಿಪಾಲ, ಫೆ.26: ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ...

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...
error: Content is protected !!