ಬ್ರಹ್ಮಾವರ, ಜು.23: ಗೋವಿಗಾಗಿ ಮೇವು ಅಭಿಯಾನದಡಿ ರೋಟರಿ ಕ್ಲಬ್ ಬಾರ್ಕೂರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾರ್ಕೂರು ಶೌರ್ಯ ಘಟಕದ ವತಿಯಿಂದ ಹಸಿಹುಲ್ಲು ಕಟಾವು ಮಾಡಿ ಸೋದೆ ವಾದಿರಾಜ ಮಠದ ಕಾಮಧೇನು ಗೋರಕ್ಷಣಾ ಸಮಿತಿ ಹೂವಿನಕೆರೆ ಅಸೋಡು ಕೋಟೇಶ್ವರ ಇವರಿಗೆ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷರಾದ ಬಿ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಎಚ್ ಅಜಿತ್ ಕುಮಾರ್ ಶೆಟ್ಟಿ, ಬಿ ಸುಧಾಕರ್ ರಾವ್, ಗಣೇಶ್ ಆಚಾರ್, ಶೌರ್ಯ ತಂಡದ ಮಂಜುನಾಥ ಪೂಜಾರಿ ಹೊಸಾಳ ಗರಡಿ, ಸಂದೀಪ್ ಅಮೀನ್ ಕೂರಾಡಿ, ಗೌರಿ ವಿ ಪೂಜಾರಿ ಶೌರ್ಯ ತಂಡದ ತಂಡದ ಸದಸ್ಯರು ಉಪಸ್ಥಿತರಿದ್ದರು. ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ್ ನ ಮಾಲಕರಾದ ಶ್ರೀನಿವಾಸ್ ಶೆಟ್ಟಿಗಾರ್ ಸಹಕರಿಸಿದರು.
ಗೋಶಾಲೆಗೆ ಹಸಿಹುಲ್ಲು ಹಸ್ತಾಂತರ

ಗೋಶಾಲೆಗೆ ಹಸಿಹುಲ್ಲು ಹಸ್ತಾಂತರ
Date: