ಉಡುಪಿ, ಜು.15: ಕರ್ನಾಟಕ ರಾಜ್ಯದ ನೂತನ ಉಪಲೋಕಾಯುಕ್ತರಾಗಿ ನೇಮಕಗೊಂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಇವರನ್ನು ಉಡುಪಿ ವಕೀಲರ ಸಂಘದಿಂದ ಅಭಿನಂದಿಸಲಾಯಿತು. ನೂತನ ಉಪ ಲೋಕಾಯುಕ್ತರನ್ನು ಉಡುಪಿಗೆ ಆಹ್ವಾನಿಸಿದ ನಿಯೋಗವು, ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ನೌಕರ ವರ್ಗದಲ್ಲಿ ಚುರುಕು ಮೂಡಿಸಿ, ಜನಸಾಮಾನ್ಯರಿಗೆ ಸರಕಾರಿ ಸೇವೆಗಳು ಶೀಘ್ರ ದೊರಕುವಂತೆ ಮಾಡಬೇಕೆಂದು ಮನವಿ ಮಾಡಿತು. ನಿಯೋಗದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪದಾಧಿಕಾರಿಗಳಾದ ಆರೂರು ಸುಕೇಶ್ ಶೆಟ್ಟಿ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಬೈಲೂರು ರವೀಂದ್ರ ದೇವಾಡಿಗ, ರಜನಿಕಾಂತ್ ಉಪಸ್ಥಿತರಿದ್ದರು.
ಉಪಲೋಕಾಯುಕ್ತರಿಗೆ ಉಡುಪಿ ವಕೀಲರ ಸಂಘದಿಂದ ಅಭಿನಂದನೆ

ಉಪಲೋಕಾಯುಕ್ತರಿಗೆ ಉಡುಪಿ ವಕೀಲರ ಸಂಘದಿಂದ ಅಭಿನಂದನೆ
Date: