ಕಾರ್ಕಳ, ಜು.12: ಐ.ಸಿ.ಎ.ಐ ಮೇ ತಿಂಗಳಲ್ಲಿ ನಡೆಸಿದ 2024ರ ಸಾಲಿನ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮೂವರು ಹಳೆ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ವಿದ್ಯಾರ್ಥಿಗಳಾದ ಸುಹಾಸ್ ಎ.ಶೆಟ್ಟಿ (ಹಿರಿಯಡ್ಕದ ಅಂಜಾರು ನಿವಾಸಿ ಅಶೋಕ್.ಎನ್.ಶೆಟ್ಟಿ ಹಾಗೂ ಸರೋಜ.ಎ.ಶೆಟ್ಟಿ ದಂಪತಿಗಳ ಸುಪುತ್ರ), ಕೆ.ಪ್ರಮೋದ್ ಶೆಣೈ (ಹಿರಿಯಡ್ಕದ ಕೆ.ಏಕನಾಥ್ ಶೆಣೈ ಮತ್ತು ಕೆ.ಮಾಲಿನಿ ಶೆಣೈ ದಂಪತಿಗಳ ಸುಪುತ್ರ), ಹಾಗೂ ತನಿಶ್ ವಿ. ಗುಜರಾನ್ (ಹಿರಿಯಡ್ಕದ ವಿಜಯ್ ಕುಮಾರ್ ಎಚ್ ಮತ್ತು ವಿನುತಾ ವಿಜಯ್ ಕುಮಾರ್ ಪುತ್ರ) ಸಿ.ಎ.ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ತನ್ನ ಹುಟ್ಟೂರಿಗೂ, ಪೋಷಕರಿಗೂ ಹಾಗೂ ಓದಿದ ವಿದ್ಯಾಸಂಸ್ಥೆಗಳಿಗೂ ಕೀರ್ತಿಯನ್ನು ತಂದಿರುತ್ತಾರೆ. ಇವರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ, ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವಾಣಿಜ್ಯ ವಿಭಾಗ ಸಹಿತ ಜ್ಞಾನಸುಧಾ ಪರಿವಾರವು ಹರ್ಷ ವ್ಯಕ್ತಪಡಿಸಿದೆ.
ಸಿ.ಎ. ಅಂತಿಮ ಪರೀಕ್ಷೆ ಜ್ಞಾನಸುಧಾದ ಮೂವರು ಹಳೆ ವಿದ್ಯಾರ್ಥಿಗಳು ತೇರ್ಗಡೆ
ಸಿ.ಎ. ಅಂತಿಮ ಪರೀಕ್ಷೆ ಜ್ಞಾನಸುಧಾದ ಮೂವರು ಹಳೆ ವಿದ್ಯಾರ್ಥಿಗಳು ತೇರ್ಗಡೆ
Date: