Friday, October 18, 2024
Friday, October 18, 2024

ಬಸ್ಸುಗಳು ಪರವಾನಿಗೆಯಲ್ಲಿ ನಿಗದಿಪಡಿಸಿದ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಬಸ್ಸುಗಳು ಪರವಾನಿಗೆಯಲ್ಲಿ ನಿಗದಿಪಡಿಸಿದ ಮಾರ್ಗದಲ್ಲಿ ಸಂಚರಿಸಲು ಸೂಚನೆ

Date:

ಉಡುಪಿ, ಜು.11: ಸಂತೆಕಟ್ಟೆಯಿಂದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು-ಎನ್.ಎಚ್ 17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು-ಕರಾವಳಿ ಬೈಪಾಸ್-ಅಂಬಲಪಾಡಿ ಬೈಪಾಸ್- ಬ್ರಹ್ಮಗಿರಿ-ಅಜ್ಜರಕಾಡು-ಹಳೇ ತಾಲೂಕು ಕಚೇರಿ ಮೂಲಕ ಸಿಟಿ ಬಸ್ಸು ನಿಲ್ದಾಣ ತಲುಪಲು, ಸಂತೆಕಟ್ಟೆಯಿಂದ ಉಡುಪಿಗೆ ಬರುವ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು-ತಾಂಗದಗಡಿ-ಗುಂಡಿಬೈಲು- ಕಲ್ಸಂಕ ಮಾರ್ಗವಾಗಿ ಸಂಚರಿಸಿ ಸಿಟಿ ಬಸ್ಸು ನಿಲ್ದಾಣ ತಲುಪಲು ಮತ್ತು ಬಾರ್ಕೂರು ಬ್ರಹ್ಮಾವರ- ಹೊನ್ನಾಳ-ಹೆಬ್ರಿ-ಪೆರ್ಡೂರು-ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕ ಬಂದು ಉಡುಪಿ ಬಸ್ ನಿಲ್ದಾಣ ತಲುಪುವಂತೆ ಅಧಿಸೂಚನೆ ಹೊರಡಿಸಲಾಗಿರುತ್ತದೆ.

ಆದರೆ ಈಗಾಗಲೇ ಹಲವು ಬಾರಿ ಈ ಕುರಿತು ನೋಟೀಸ್ ನೀಡಿ ಪ್ರಕರಣ ದಾಖಲಿಸಿದ್ದರೂ ಕೂಡ ಅಂಬಾಗಿಲು-ಕಲ್ಪಂಕ ಮಾರ್ಗದಲ್ಲಿ ಬಸ್ಸುಗಳು ಸಂಚರಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಇದು ಅಂತಿಮ ಸೂಚನೆ ಎಂದು ಪರಿಗಣಿಸಿ ಸಂತೆಕಟ್ಟೆಯಿಂದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು-ಎನ್.ಎಚ್ 17 ಎಂದು ನಮೂದಿಸದೇ ಇರುವ ಸಿಟಿ ಬಸ್ಸುಗಳು ಮತ್ತು ಬಾರ್ಕೂರು ಬ್ರಹ್ಮಾವರ-ಹೊನ್ನಾಳ-ಹೆಬ್ರಿ- ಪೆರ್ಡೂರು-ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು-ತಾಂಗದಗಡಿ- ಗುಂಡಿಬೈಲು-ಕಲ್ಸಂಕ ಮಾರ್ಗವಾಗಿ ಕಡ್ಡಾಯವಾಗಿ ಸಂಚರಿಸುವಂತೆ ಸಂಬಂಧಪಟ್ಟ ಎಲ್ಲಾ ಬಸ್ಸು ಮಾಲೀಕರಿಗೆ ಆದೇಶಿಸಲಾಗಿದೆ. ತಪ್ಪಿದಲ್ಲಿ ಪರವಾನಿಗೆ ರದ್ದು ಪಡಿಸಲು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!