Sunday, January 19, 2025
Sunday, January 19, 2025

ಗೀತಾನ್ವೇಷಣೆ ನಮ್ಮ ಪ್ರಧಾನ ಗುರಿ: ಪುತ್ತಿಗೆ ಶ್ರೀಪಾದರು

ಗೀತಾನ್ವೇಷಣೆ ನಮ್ಮ ಪ್ರಧಾನ ಗುರಿ: ಪುತ್ತಿಗೆ ಶ್ರೀಪಾದರು

Date:

ಉಡುಪಿ, ಜು.7: ಈಗಾಗಲೇ ಶ್ರೀಕೃಷ್ಣನಿಗೆ ಗೀತಾಧ್ಯಾಯ ಭಾವ ಪರಿಚಯ ಕೃತಿಯನ್ನು ಸಮರ್ಪಿಸಿರುವ ನಾವು ಗೀತಾನ್ವೇಷಣೆಯ ಸಂಕಲ್ಪವನ್ನು ಮಾಡಿದ್ದೇವೆ. ನೈಜವಾದ ಗೀತಾಸ್ವರೂಪವನ್ನು ಸಜ್ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಗೀತಾಪಾಠ-ಪ್ರವಚನವನ್ನು ಪ್ರಾರಂಭಿಸುತ್ತಿದ್ದೇವೆ. ಶ್ರೀ ಮಧ್ವಾಚಾರ್ಯರು ಕರುಣಿಸಿರುವ ಭಾಷ್ಯದ ನೆರಳಲ್ಲಿ ಹೊಸ ದೃಷ್ಟಿಕೋನದಿಂದ ವಿಮರ್ಶಾತ್ಮಕವಾದ ಪಾಠವನ್ನು ‌ಸಂಕಲ್ಪಿಸಿದ್ದೇವೆ. ಶ್ರೀಕೃಷ್ಣನು ಗೀತೆಯಲ್ಲಿ ತಿಳಿಸಿದಂತೆ ಗೀತೆಯ ಉಪದೇಶವನ್ನು ಮೊದಲು ಸ್ವೀಕರಿಸಿದವನು ಸೂರ್ಯ. ‘ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಂ’ ಎಂದು. ಅದಕ್ಕೆ ಸಂವಾದಿಯಂಬಂತೆ ಪಾಠದ ಮೊದಲ ದಿನವೇ ಶ್ರೀಕೃಷ್ಣ ‘ಸೂರ್ಯ ಪಾರ್ಥಸಾರಥಿ’ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾನೆ. ಆದ್ದರಿಂದ ಶ್ರೀಕೃಷ್ಣನ ಪರಮಾನುಗ್ರಹದಿಂದ ಪಾಠವು ನಿರ್ವಿಘ್ನವಾಗಿ ನಡೆಯಲಿ ಎಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಾರ್ಥಿಸಿದರು.

ವಿಶ್ವ ಗೀತಾ ಪರ್ಯಾಯದ ಅವಧಿಯಲ್ಲಿ ಹಮ್ಮಿಕೊಂಡಿರುವ ಜ್ಞಾನ ಯಜ್ಞದ ಅಂಗವಾಗಿ ಭಗವದ್ಗೀತಾ ಪಾಠವನ್ನು ಸರ್ವಜ್ಞ ಪೀಠದಿಂದ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಶತಾವಧಾನಿಗಳಾದ ಉಡುಪಿ ರಾಮನಾಥ ಆಚಾರ್ಯ, ಡಾ. ಬಿ.ಗೋಪಾಲಾಚಾರ್ಯ, ವಿದ್ವಾನ್ ವೇದವ್ಯಾಸ ಪುರಾಣಿಕ್, ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!