Home ಸುದ್ಧಿಗಳು ಪ್ರಾದೇಶಿಕ ಕೃಷಿ ತರಬೇತಿ ಕಾರ್ಯಕ್ರಮ

ಕೃಷಿ ತರಬೇತಿ ಕಾರ್ಯಕ್ರಮ

106
0

ಕೋಟ, ಜು.2: ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಇವರ ವತಿಯಿಂದ ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ಮುಂಗಾರು ಹಂಗಾಮಿನ ಭತ್ತದ ಗದ್ದೆಗಳಲ್ಲಿ ವೌಚೇರಿಯಾ (ಹಳದಿ ಹಸಿರು ಪಾಚಿ) ಚೌತಿಯ ಕಳೆ ಹಾಗೂ ಇತರೆ ಕಳೆ ಜಾತಿಗಳ ನಿರ್ವಹಣೆ ಹೊರಾಂಗಣ ತರಬೇತಿ ಕಾರ್ಯಕ್ರಮ ಮಣೂರು ಪಡುಕೆರೆ ಗ್ರಾಮದ ಪ್ರಗತಿಪರ ಕೃಷಿಕರಾದ ಜಯರಾಮ ಶೆಟ್ಟಿ ಇವರ ಮನೆಯ ವಠಾರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪ್ರಗತಿ ಪರ ಕೃಷಿಕರಾದ ಕೃಷಯ್ಯ ಶೆಟ್ಟಿ ಉದ್ಘಾಟಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ, ಬ್ರಹ್ಮಾವರದ ಕೆ.ವಿ.ಕೆ. ವಿಜ್ಞಾನಿ ಡಾ. ಎನ್.ನವೀನ (ಬೇಸಾಯಶಾಸ್ತ್ರ) ಇವರು ಭತ್ತದ ಗದ್ದೆಗಳಲ್ಲಿ ಬರುವ ವಿವಿಧ ಜಾತಿಯ ಕಳೆಗಳ ನಿರ್ವಹಣೆ ಬಗ್ಗೆ ನೆರೆದಿದ್ದ ರೈತರಿಗೆ ಮಾಹಿತಿಯನ್ನು ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಇಂತಹ ವಿಶೇಷವಾದ ಕಾರ್ಯಕ್ರವನ್ನು ಆಯೋಜನೆ ಮಾಡಿದ ಕೃಷಿ ವಿಜ್ಞಾನ ಕೇಂದ್ರದ ಪ್ರಯತ್ನ ಶ್ಲಾಘನೀಯ ಎಂದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.