Home ಸುದ್ಧಿಗಳು ಪ್ರಾದೇಶಿಕ ವೈದ್ಯರ ಕೊಡುಗೆ ಪ್ರಶಂಸನೀಯ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ

ವೈದ್ಯರ ಕೊಡುಗೆ ಪ್ರಶಂಸನೀಯ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ

90
0

ಉಡುಪಿ, ಜು.2: ವೈದ್ಯಕೀಯ ವೃತ್ತಿ ತುಂಬಾ ಅಮೂಲ್ಯವಾದದ್ದು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ನಿಷ್ಕಾಮ, ನಿಸ್ವಾರ್ಥ ಸೇವೆ ಸಲ್ಲಿಸುವ ವೈದ್ಯರ ಕೊಡುಗೆ ಪ್ರಶಂಸನೀಯ ಎಂದು ಕರ್ನಾಟಕದ ಪ್ರಥಮ ಮಹಿಳಾ ಹೃದಯ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹೇಳಿದರು. ಅವರು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿ ಪ್ರಸ್ತುತ ವೈದ್ಯರಿಗಿರುವ ಸವಾಲುಗಳು, ಅದನ್ನು ಯಾವ ರೀತಿಯಲ್ಲಿ ಎದುರಿಸಿ ಮುನ್ನಡೆಯ ಬೇಕೆಂದು ಸಲಹೆ ನೀಡಿದರು.

ಹಿರಿಯ ವೈದ್ಯರುಗಳಾದ ಮಣಿಪಾಲದ ಕುಟುಂಬ ವೈದ್ಯ ಡಾ. ಗಣೇಶ್ ಪೈ, ಕಸ್ತೂರ್ಬಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ನ ಡಾ. ರಾಜಗೋಪಾಲ್ ಶೆಣೈ ಹಾಗೂ ಉಡುಪಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಶಾಸ್ತ್ರಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಯುವ ವೈದ್ಯ ಪ್ರತಿಭೆ ಡಾ. ವಿನುತಾ ವಿನೋದ್, ಸಾಮಾಜಿಕವಾಗಿ ಕೆರೆಗಳ ಪುನಶ್ಚೇತನ ಮೌನ ಕ್ರಾಂತಿ ನಡೆಸಿದ ಡಾ. ಸತೀಶ್ ಕಾಮತ್, ಆರ್ಯಭಟ ಪ್ರಶಸ್ತಿ ವಿಜೇತೆ ಡಾ. ಶ್ರುತಿ ಬಲ್ಲಾಳ್ ರನ್ನು ಗೌರವಿಸಲಾಯಿತು. ಭಾ.ವೈ.ಸಂಘದ ಅಧ್ಯಕ್ಷ ಡಾ. ರಾಜಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಡಾ. ಆಮ್ನಾ ಹೆಗ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಇಂದಿರಾ ಶಾನಭಾಗ್ ಹಾಗೂ ಖಚಾಂಚಿ ಡಾ. ಅಕ್ಷತಾ ರಾವ್ ಉಪಸ್ಥಿತರಿದ್ದರು.

ಸಹ ಕಾರ್ಯದರ್ಶಿ ಡಾ. ಶರತ್ ಚಂದ್ರ ರಾವ್, ಡಾ. ಬಿ.ಸಿ ರಾಯ್ ರವರಿಗೆ ನುಡಿ ನಮನ ಸಲ್ಲಿಸಿದರು. ಡಾ. ವತ್ಸಲಾ ರಾವ್ ಹಾಗೂ ಡಾ. ವೀಣಾ ಉಮೇಶ್ ನಿರೂಪಿಸಿದರು. ಭಾ.ವೈ. ಸಂಘದ ಕಾರ್ಯದರ್ಶಿ ಡಾ. ಅರ್ಚನಾ ಭಕ್ತ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.