Home ಸುದ್ಧಿಗಳು ಪ್ರಾದೇಶಿಕ ಆಧ್ಯಾತ್ಮಿಕ ಕ್ಷೇತ್ರವಾಗಿ ಡಿವೈನ್ ಪಾರ್ಕ್ ಗುರುತಿಸಿಕೊಂಡಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಆಧ್ಯಾತ್ಮಿಕ ಕ್ಷೇತ್ರವಾಗಿ ಡಿವೈನ್ ಪಾರ್ಕ್ ಗುರುತಿಸಿಕೊಂಡಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

1823
0

ಕೋಟ, ಜೂ.30: ಡಿವೈನ್ ಪಾರ್ಕ್ ಆಧ್ಯಾತ್ಮಿಕ ಕ್ಷೇತ್ರವಾಗಿ ತನ್ನ ಕೀರ್ತಿಯನ್ನು ಜಗದಗಲಕ್ಕೆ ಪಸರಿಸಿಕೊಂಡಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸಾಲಿಗ್ರಾಮದ ಸ್ವಾಮೀ ವಿವೇಕಾನಂದರ ದಿವ್ಯ ಲೀಲಾಕ್ಷೇತ್ರ ಡಿವೈನ್ ಪಾರ್ಕ್ ನಲ್ಲಿ ಡಾ. ಚಂದ್ರಶೇಖರ್ ಗುರೂಜೀ ಭವ್ಯ ಬಾಳಿನ ಬುತ್ತಿ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಡಾಕ್ಟರ್ ಜೀಯವರು ಹಾಕಿಕೊಟ್ಟ ಸ್ವಾಮೀ ವಿವೇಕಾನಂದರ ಆದರ್ಶಗಳನ್ನು ತನ್ನ ಸ್ಮೃತಿ ಪಟಲದೊಳಗೆ ಮೈಗೂಡಿಸುವ ತಾಣವಾಗಿದೆ. ಇಂಥಹ ಕ್ಷೇತ್ರದಲ್ಲಿ ಗೌರವ ಸ್ವೀಕರಿಸುವುದೇ ನಮ್ಮ ಭಾಗ್ಯವಾಗಿದೆ. ರಾಜಕಾರಣದ ಮಜಲುಗಳನ್ನು ಮೇಳೈಸಿಕೊಂಡ ವ್ಯಕ್ತಿಗಳಿಗೆ ಇಲ್ಲಿನ ಡಾಕ್ಟರ್ ಜೀ ಕೃಪಾಶೀರ್ವಾದ ಮತ್ತಷ್ಟು ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಸುಸ್ಥಿರ ಸಮಾಜ ಕಟ್ಟಲು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಒಟ್ಟಾಗಿ ಅರ್ಥಗರ್ಭಿತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಕೃತಿಯನ್ನು ಬಿಡುಗಡೆಗೊಳಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇವರುಗಳನ್ನು ಡಿವೈನ್ ಪಾರ್ಕ್ ವತಿಯಿಂದ ಗೌರವಿಸಲಾಯಿತು. ಸಭೆಯ ಆರಂಭದಲ್ಲಿ ಡಾಕ್ಟರ್ ಜೀ ಚಂದ್ರಶೇಖರ್ ಉಡುಪ ಇವರು ಗುರು ಸಂದೇಶ ನೀಡಿದರು. ಸಭೆಯಲ್ಲಿ ಡಿವೈನ್ ಪಾರ್ಕ್ ಟ್ರಸ್ಟಿಗಳಾದ ಡಾ.ಬಾಪಟ್ಟ, ಕರಿಸಿದ್ದಪ್ಪ ಉಪಸ್ಥಿತರಿದ್ದರು. ಡಿವೈನ್ ಪಾರ್ಕ್ ಹಾಗೂ ಮೂಡುಗಿಳಿಯಾರು ಇಲ್ಲಿನ ಯೋಗಬನ ಸರ್ವಕ್ಷೇಮ ಆಸ್ಪತ್ರೆಯ ನಿರ್ದೇಶಕ ಡಾ. ವಿವೇಕ್ ಉಡುಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.