ಬ್ರಹ್ಮಾವರ, ಜೂ.30: ಉಡುಪಿ ಗ್ರಾಮಾಂತರ ಬಿಜೆಪಿ ಮಂಡಲ ವತಿಯಿಂದ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆ ಅಂಗವಾಗಿ ಚಾಂತಾರು ಗ್ರಾಮದ ಬೂತ್ ಸಂಖ್ಯೆ 30 ಕಾರ್ಯಕರ್ತರಾದ ಶ್ರೀಕಾಂತ ಭಂಡಾರಿಯವರ ನಿವಾಸದಲ್ಲಿ ಆಯೋಜಿಸಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭಾಗವಹಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಕಲ್ಪನೆಯ ‘ಏಕ್ ಪೇಡ್ ಮಾ ಕೆ ನಾಮ್’ ತಾಯಿಯ ಹೆಸರಿನಲ್ಲಿ ಒಡ್ನು ಗಿಡ ನೀಡೋಣ ಜಗತ್ತು ಉಳಿಸೋಣ ಅಭಿಯಾನದ ಅಂಗವಾಗಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ 111 ನೇ ಸಂಚಿಕೆಯನ್ನು ಪಕ್ಷದ ಕಾರ್ಯಕರ್ತರೊಂದಿಗೆ ವೀಕ್ಷಿಸಿದರು. ಉಡುಪಿ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷರಾದ ರಾಜೀವ್ ಕುಲಾಲ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯಕ್ ಅಲೆವೂರು, ರಾಘವೇಂದ್ರ ಕುಂದರ್, ಪಕ್ಷದ ಪ್ರಮುಖರಾದ ನಳಿನಿ ಪ್ರದೀಪ್ ರಾವ್, ನಿಶಾನ್ ರೈ, ಗೌತಮ್, ನಿತ್ಯಾನಂದ ಪೂಜಾರಿ, ದಿನೇಶ್ ಚಾಂತಾರು ಮುಂತಾದವರು ಉಪಸ್ಥಿತರಿದ್ದರು.