ಕೋಟ, ಜೂ.27: ಮಳೆಗಾಲದಲ್ಲಿ ಸಾಮಾನ್ಯವಾಗಿ ಮೆದಳು ಜ್ವರ, ಆನೆಕಾಲು ರೋಗ, ಚಿಕನ್ ಗೂನ್ಯ, ಡೆಂಗ್ಯೂ, ಮಲೇರಿಯದಂತ ಐದು ಖಾಯಿಲೆಗಳು ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಸೊಳ್ಳೆಗಳು. ಈ ಸೊಳ್ಳೆಗಳು ಹರಡುವ ರೋಗಗಳಿಂದ ನರಳುವವರ ಹಾಗು ಸಾಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸೊಳ್ಳೆಗಳು ಹರಡುವ ರೋಗಗಳಿಂದ ದೇಶದ ಆರ್ಥಿಕ ಸ್ಥಿತಿಗೆ ತೊಂದರೆಯಾಗಲಿದೆ. ಮನೆಯ ಸುತ್ತ ನೀರು ನಿಲ್ಲದಂತೆ ತೆಂಗಿನ ಬೊಂಡ, ಪ್ಲಾಸ್ಟಿಕ್ ಲೋಟ ಹಾಗೂ ಬಾಟಲಿಗಳಲ್ಲಿ ಹಾಗೂ ಚರಂಡಿಯಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಸಂತತಿ ಹೆಚ್ಚುತ್ತದೆ. ಹಾಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜ್ವರ ಬಂದ ಕೂಡಲೇ ಸ್ವಯಂ ಚಿಕಿತ್ಸೆ ಮಾಡದೇ, ವೈದ್ಯರಿಗೆ ತೋರಿಸಬೇಕು ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ದೇವಪ್ಪ ಪಟಗಾರ್ ಹೇಳಿದರು. ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ವಿಜ್ಞಾನ ಸಂಘದ ಮಳೆಗಾಲದಲ್ಲಿ ಬರುವ ಖಾಯಿಲೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಆರೋಗ್ಯ ಆಧಿಕಾರಿ ಹರಿಶ್ಚಂದ್ರ, ವಿಜ್ಞಾನ ಸಂಘದ ಸಂಚಾಲಕಿ ನಾಗರತ್ನ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿ, ಹಿರಿಯ ಶಿಕ್ಷಕ ವೆಂಕಟೇಶ ಉಡುಪ ವಂದಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ನಿಶಾಂತ ಕಿಣಿ ಕಾರ್ಯಕ್ರಮ ನಿರೂಪಿಸಿದರು.
ಸೊಳ್ಳೆ ವಂಶವೃದ್ಧಿಯಿಂದ ದೇಶದ ಆರ್ಥಿಕತೆಗೆ ತೊಂದರೆ: ದೇವಪ್ಪ ಪಟಗಾರ್
ಸೊಳ್ಳೆ ವಂಶವೃದ್ಧಿಯಿಂದ ದೇಶದ ಆರ್ಥಿಕತೆಗೆ ತೊಂದರೆ: ದೇವಪ್ಪ ಪಟಗಾರ್
Date: