ಕೋಟ, ಜೂ.27: ಸಾಸ್ತಾನ ಗೋಳಿಬೆಟ್ಟು ಐರೋಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಬಿ. ಕುಸುಮಾಕರ ಶೆಟ್ಟಿ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಶಾಲಾವೃದ್ಧಿ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ ಸತೀಶ್, ಉಪಾಧ್ಯಕ್ಷರಾದ ವಿಜಯ್ ಪೂಜಾರಿ, ಸದಸ್ಯರಾದ ಮಂಜನ ಗೌಡ ಪಾಟೀಲ್ ಮತ್ತು ಕವಿತಾ ಆದರ್ಶ್ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಭವಾನಿ ಮತ್ತು ಅಕ್ಷತಾ ಸಹಕರಿಸಿದರು.
ಗೋಳಿಬೆಟ್ಟು ಶಾಲೆ: ಉಚಿತ ನೋಟ್ ಪುಸ್ತಕ ವಿತರಣೆ

ಗೋಳಿಬೆಟ್ಟು ಶಾಲೆ: ಉಚಿತ ನೋಟ್ ಪುಸ್ತಕ ವಿತರಣೆ
Date: