Sunday, September 29, 2024
Sunday, September 29, 2024

ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ನಕ್ಷತ್ರಿ ಕುಟುಂಬದ ಕಾರ್ಯ ಶ್ಲಾಘನೀಯ: ಕೆ.ಜಗದೀಶ್ ನಾವಡ

ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ನಕ್ಷತ್ರಿ ಕುಟುಂಬದ ಕಾರ್ಯ ಶ್ಲಾಘನೀಯ: ಕೆ.ಜಗದೀಶ್ ನಾವಡ

Date:

ಕೋಟ, ಜೂ. 25: ಕೃಷಿ ಭೂಮಿ ಪ್ರಸ್ತುತ ಲ್ಯಾಂಡ್ ಮಾಫಿಯಾದಿಂದ ಅವನತಿಯ ದಾರಿ ತಲುಪುತ್ತಿದೆ, ಆದರೆ ಅಲ್ಲಲ್ಲಿ ಅಳಿದುಳಿದ ಭೂಮಿಯಲ್ಲಿ ಹಳೆ ತಲೆಮಾರು ಕೃಷಿ ಕಾರ್ಯ ನಡೆಸುತ್ತಿದೆ. ಈ ನಿಟ್ಟಿನಲ್ಲಿ ನಕ್ಷತ್ರಿ ಕುಟುಂಬ ರೈತಕಾಯಕ ನಿಜಕ್ಕೂ ಶ್ಲಾಘನೀಯ ಎಂದು ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು. ಬಾಲಕೃಷ್ಣ ನಕ್ಷತ್ರಿ ಮನೆಯಂಗಳದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲದ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ನೇತೃತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ೩೬ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ಯುವ ಸಮುದಾಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಕೃಷಿ ಉಳಿಸಲು ಸಾಧ್ಯ. ಇಂಥಹ ಸಂದರ್ಭದಲ್ಲಿ ನಕ್ಷತ್ರಿ ಕುಟುಂಬ ಅದೆಷ್ಟೋ ಹಡಿಲು ಭೂಮಿಯನ್ನು ಹಸನಾಗಿಸಿದ್ದಾರೆ. ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಪುತ್ರರಾದ ಬಾಲಕೃಷ್ಣ, ಬಾಲಚಂದ್ರ ನಕ್ಷತ್ರಿ ಕುಟುಂಬಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪರಿಸರ ಕಾಳಜಿಯ ನಿಮಿತ್ತ ಗಿಡ ನೆಡಲಾಯಿತು.

ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಸಂಯೋಜಕ ರವೀಂದ್ರ ಮೊಗವೀರ ಕೃಷಿ ಸವಲತ್ತಿನ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಉಪನ್ಯಾಸಕ ಸಂಜೀವ ಗುಂಡ್ಮಿ, ಪಾಂಚಜನ್ಯ ಸಂಘ ಹಂದಟ್ಟು ಪಾರಂಪಳ್ಳಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಂಚಾಲಕಿ ವನೀತಾ ಉಪಾಧ್ಯಾ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಜತೆ ಕಾರ್ಯದರ್ಶಿ ಶಕೀಲ ಎನ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣದ ಸಾಂಸ್ಕೃತಿಕ ಕಾರ್ಯದರ್ಶಿ ಶಶಿಧರ ತಿಂಗಳಾಯ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾಸ್ಕೆಟ್ ಬಾಲ್: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಗಣಿತನಗರ, ಸೆ.28: ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ...

ಗುರುಪ್ರಸಾದ್ ಎ. ರವರಿಗೆ ಬೀಳ್ಕೊಡುಗೆ

ಮಣಿಪಾಲ, ಸೆ.28: ಸುಮಾರು 34 ವರ್ಷಗಳಿಂದ, ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಿಕಲ್...

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕಾಪು, ಸೆ.28: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್...

ಸಾಹಿತ್ಯದ ಓದಿನಿಂದ ವಿಕಸನ: ರಾಜೇಂದ್ರ ಭಟ್ ಕೆ

ಕಾರ್ಕಳ, ಸೆ.28: ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ....
error: Content is protected !!