Sunday, November 24, 2024
Sunday, November 24, 2024

ಹೆತ್ತವರು ಮಕ್ಕಳ ಮನಸ್ಸಿಗೆ ಧನಾತ್ಮಕ ಆದೇಶ ನೀಡಬೇಕು: ಕೆ. ಸದಾಶಿವ ರಾವ್

ಹೆತ್ತವರು ಮಕ್ಕಳ ಮನಸ್ಸಿಗೆ ಧನಾತ್ಮಕ ಆದೇಶ ನೀಡಬೇಕು: ಕೆ. ಸದಾಶಿವ ರಾವ್

Date:

ಉದ್ಯಾವರ: ನಾವು ಬೆಳೆದು ಎಷ್ಟು ದೊಡ್ಡವರಾದರೂ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಂದೂ ಮರೆಯದೇ ನೆನಪಿಡುತ್ತೇವೆ. ಏಕೆಂದರೆ ಅವರು ನಮ್ಮ ಮೇಲೆ ಬೀರಿದ ಪ್ರಭಾವ ಆ ರೀತಿಯಲ್ಲಿರುತ್ತದೆ.

ಹಾಗಾಗಿ ಶಿಕ್ಷಕರು ಕೂಡ ವಿದ್ಯಾರ್ಥಿಗಳೊಡನೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಅದರೊಡನೆ ಹೆತ್ತವರು ಕೂಡ ವಿದ್ಯಾರ್ಥಿಗಳಿಗೆ ಧನಾತ್ಮಕವಾಗಿ
ಅದೇಶವನ್ನು ನೀಡಬೇಕು.

ವಿದ್ಯಾರ್ಥಿಗಳನ್ನು ಎಚ್ಚರಿಸುವಾಗ ಋಣಾತ್ಮಕ ಸಂಗತಿಗಳನ್ನು ಹೇಳದೇ ಅದನ್ನೆ ಧನಾತ್ಮಕವಾಗಿ ಹೇಳಿದರೆ ಮಕ್ಕಳ ಮನಸ್ಸಲ್ಲಿ ಅದರ ಪರಿಣಾಮ ಬೀರಿ ಮಕ್ಕಳು ತಿದ್ದಿಕೊಳ್ಳಲು ಸಹಾಯವಾಗುತ್ತದೆ.

ವಿದ್ಯಾರ್ಥಿಗಳು ಚಟುವಟಿಕೆಗಳ ಒಂದು ಆಗರ. ಅವರಲ್ಲಿ ಪಾಠ, ಆಟ, ಕಲಿಯುವಿಕೆ, ಕಲಾಪ್ರಕಾರ ಇವೆಲ್ಲಾ ಚಟುವಟಿಕೆಗಳನ್ನು ಏಕಕಾಲದಲ್ಲಿ ಮಾಡುವ ಶಕ್ತಿ ಇದೆ.

ಆ ಶಕ್ತಿಯನ್ನು ಉಳಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಹೆತ್ತವರದ್ದು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೆ. ಸದಾಶಿವ ರಾವ್ ಹೇಳಿದರು.

ಅವರಯ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ “ವರ್ಷದ ಹರ್ಷ ನೂರರ್ವತ್ತೊಂದು” ಸಮಾರಂಭದಲ್ಲಿ ಜರಗಿದ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ತನಕದ ವಿದ್ಯಾರ್ಥಿಗಳ ಬಹುಮಾನ ವಿತರಣೆ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿದ್ಯಾರ್ಥಿಗಳು ಪಾಠದಷ್ಟೇ ಪಾಠೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲವಾದರೇ ಬೆಳೆದು ದೊಡ್ಡವರಾದಾಗ ಸೃಜನಶೀಲತೆ ಬತ್ತಿ ಖಿನ್ನತೆಗೆ ಒಳಗಾಗುವ ಅಪಾಯ ಇದೆ. ಹಾಗಾಗಿ ಮಕ್ಕಳು ಯಾವುದಾದರೂ ಒಂದು ಕಲಾಪ್ರಕಾರದಲ್ಲಿ ತೊಡಗಿಕೊಳ್ಳಿ. ಅದು ನಿಮ್ಮ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.

ಸಮಾರಂಭದಲ್ಲಿ ಶುಭಾಶಂಸನೆಗೈದ ಶಾಲಾ ಹಳೆ ವಿಧ್ಯಾರ್ಥಿನಿ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾರವರು, ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೇ ಈ ಶಾಲೆ. ಇವತ್ತಿಗೂ ಕೂಡ ಈ ಶಾಲೆಯ ನೆನಪುಗಳು ಮರುಕಳಿಸುತ್ತದೆ.

ಒಂದು ಅನುದಾನಿತ ಹಳ್ಳಿ ಶಾಲೆಯಾಗಿದ್ದುಕೊಂಡು ಆಧುನಿಕ ಶಿಕ್ಷಣ ನೀಡುವ ಬಗ್ಗೆ ಈ ಶಾಲೆ ಆಲೋಚಿಸುತ್ತಿರುವುದೇ ಈ ಶಾಲೆಯ ಹೆಚ್ಚುಗಾರಿಕೆ ವಿದ್ಯಾರ್ಥಿಗಳಿಗೆ ತಾವು ಕನ್ನಡ ಮಾಧ್ಯಮದಲ್ಲಿ
ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬೇಡ.

ಕನ್ನಡ ಮಾಧ್ಯಮದಲ್ಲಿ ಕಲಿತವರು ಕೂಡ ದೊಡ್ಡ ದೊಡ್ಡ
ಅಧಿಕಾರಿಗಳಾಗಿರುವ ನಿದರ್ಶನಗಳು ನಮ್ಮ ಮುಂದಿದೆ. ಕೆಲಸ ದೊಡ್ಡದಿರಲಿ ಸಣ್ಣದಿರಲಿ ಡಿಗ್ನಿಟಿ ಆಫ್ ಲೇಬರನ್ನು ನಾವು ಇಟ್ಟುಕೊಳ್ಳಬೇಕು.

ಹೆತ್ತವರು ಅಷ್ಟೆ ಮಕ್ಕಳಿಗೆ ಯಾವ ಕ್ಷೇತದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವನ್ನು ಮಾಡಿಕೊಡಬೇಕು.

ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವುದೇ ಉದ್ದೇಶವಲ್ಲ. ಜ್ಞಾನಗಳಿಸುವ ಉದ್ದೇಶದಿಂದ ಇದರಿಂದ ಮಕ್ಕಳ ಸರ್ವಾಗೀಂಣ ಬೆಳವಣಿಗೆ ಆಗುತ್ತದೆ ಎಂದರು.

ಶಾಲಾ ಧ್ವಜಾರೋಹಣ ಮಾಡಿದ ಶಾಲಾ ಸಂಚಾಲಕರಾದ ಸುರೇಶ್ ಶೆಣೈ ಮಾತನಾಡಿ, ಕೋವಿಡ್ – 19 ಸಲುವಾಗಿ ಈ ಸಮಾರಂಭವನ್ನು ಸಭಾಂಗಣದ ಒಳಗೆ ಮೂರು ದಿನಗಳಿಗೆ ವಿಸ್ತರಿಸಿ ಮಾಡುತ್ತಿದ್ದೇವೆ.

ವಾರ್ಷಿಕ ಇಂತಹ ಚಟುವಟಿಕೆಗಳು, ಕೋವಿಡ್ – 19 ಕಾರಣದಿಂದಾಗಿ ಚಟುವಟಿಕೆಗಳು ಕುಂಠಿತವಾದ
ವಿದ್ಯಾರ್ಥಿಗಳಲ್ಲಿ ಪುನಃ ಆಸಕ್ತಿಗಳು ತುಂಬಲು ಕಾರಣವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಗಣಪತಿ ಕಾರಂತರು ಮಾತನಾಡಿ, ಶಾಲೆಯ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಈ ಸಮಾರಂಭದ ಎಲ್ಲಾ ಖರ್ಚು ವೆಚ್ಚ ಭರಿಸಿಕೊಂಡು ಸಂಘಟಿಸುತ್ತಿರುವ ಶಾಲಾ ರಕ್ಷಕ ಶಿಕ್ಷಕ ಸಂಘ ನಿಜವಾಗಿಯೂ ಅಭಿನಂದನಾರ್ಹವಾದುದು.

ಈಗ ಶಾಲೆಯಲ್ಲಿ ಸರಕಾರದ ವತಿಯಿಂದ ಒಬ್ಬರೇ ಶಿಕ್ಷಕರಿದ್ದು ಉಳಿದ ಎಂಟು ಜನ ಶಿಕ್ಷಕರನ್ನು ಆಡಳಿತ ಮಂಡಳಿ ನೇಮಿಸಿ ಕೊಂಡು ಶಾಲೆಯನ್ನು ಮುನ್ನಡೆಸುತ್ತಿದೆ.

ತಿಂಗಳೊಂದಕ್ಕೆ ಸುಮಾರು ಎಂಬತ್ತು ಸಾವಿರ ರೂಪಾಯಿಗಳ ವೆಚ್ಚ ಬರುತ್ತದೆ. ಅದನ್ನು ಸರಿತೂಗಿಸುವುದೇ ಒಂದು ಸವಾಲಾಗಿ ಪರಿಣಮಿಸಿದೆ.

ಅದಕ್ಕಾಗಿ ಆಡಳಿತ ಸಮಿತಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಪ್ರಕಾರ ರೂ. 4500.00 ತೆತ್ತು ಒಬ್ಬ ವಿದ್ಯಾರ್ಥಿಯನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಬಹುದಾಗಿದೆ.

ಹಾಗಾಗಿ ಹೆತ್ತವರು, ವಿದ್ಯಾಭಿಮಾನಿಗಳು ಈ ಯೋಜನೆಯಲ್ಲಿ ಕೈಜೋಡಿಸಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಸಹಾಯವನ್ನು ಮಾಡ ಬೇಕಾಗಿ ವಿನಂತಿಸಿದರು.

ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ತ್ರಿವೇಣಿ ವೇಣುಗೋಪಾಲ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಗಣೇಶ್ ಕುಮಾರ್, ಶಾಲಾ ವಿದ್ಯಾರ್ಥಿ ನಾಯಕ ಲಿಖಿತ್ ಕರ್ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಾಲಾ ಮುಖೋಪಾಧ್ಯಾಯರಾದ
ಹೇಮಲತಾ ಸ್ವಾಗತಿಸಿ ವರದಿ ವಾಚಿಸಿದರು. ಶಿಕ್ಷಕಿ ಪ್ರಮೀಳಾ
ಮಹೇಶ್ ಬಹುಮಾನ ಪಟ್ಟಿಯನ್ನು ವಾಚಿಸಿದರು. ಶಿಕ್ಷಕ
ವಿಕ್ರಮ ಆಚಾರ್ಯ ವಿದ್ಯಾರ್ಥಿ ವೇತನದ ಪಟ್ಟಿ ವಾಚಿಸಿ ಕೊನೆಯಲ್ಲಿ ವಂದಿಸಿದರು. ಶಿಕ್ಷಕಿ ಅನುರಾಧ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕೊನೆಯಲ್ಲಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರಗಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!