Sunday, September 29, 2024
Sunday, September 29, 2024

ಕಾರಂತ ಥೀಮ್ ಪಾರ್ಕ್: ವಾರಾಂತ್ಯ ತರಗತಿ ಆರಂಭ

ಕಾರಂತ ಥೀಮ್ ಪಾರ್ಕ್: ವಾರಾಂತ್ಯ ತರಗತಿ ಆರಂಭ

Date:

ಕೋಟ, ಜೂ.23: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಅನೌಪಚಾರಿಕ ಕೇಂದ್ರ (ರಿ) ಕೋಟ ಇದರ ಅಡಿಯಲ್ಲಿ ನಡೆಯುವ ಚಿತ್ರಕಲಾ, ಯಕ್ಷಗಾನ ನೃತ್ಯ ತರಗತಿಯ ಶೈಕ್ಷಣಿಕ ವರ್ಷದ ಆರಂಭೋತ್ಸವನ್ನು ಡಾಶಿವರಾಮ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ ಉದ್ಘಾಟಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ತರಗತಿ ಉಪಯುಕ್ತವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಇಂತಹ ತರಗತಿಗಳಲ್ಲಿ ಭಾಗವಹಿಸುವುದಕ್ಕೆ ಪೋಷಕರು ಪ್ರೋತ್ಸಾಹಿಸಬೇಕು ಎಂದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕ್ರಿಯೇಟಿವ್ ಆರ್ಟ್ನ ಚಿತ್ರಕಲಾ ಶಿಕ್ಷಕ ಗಿರೀಶ್ ಆಚಾರ್ಯ ವಕ್ವಾಡಿ, ಯಕ್ಷಗಾನ ನೃತ್ಯ ಶಿಕ್ಷಕಿ ಸಂಗೀತ ಕಾರ್ತಟ್ಟು ಉಪಸ್ಥಿತರಿದ್ದರು.

ಸಂಗೀತ ತರಗತಿ ಉದ್ಘಾಟನೆ: ಸಂಗೀತ ತರಗತಿಯನ್ನು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್ ಉದ್ಘಾಟಿಸಿ ಮಕ್ಕಳು ಶಾಲಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ತಮ್ಮನ್ನು ತೊಡಗಿಸಿಕೊಂಡಾಗ ಅವರಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಕಾರಂತ ಥೀಮ್ ಪಾರ್ಕ್ ವಾರಾಂತ್ಯದಲ್ಲಿ ಮಕ್ಕಳಿಗೆ ಹಲವು ತರಗತಿಗಳು ನಡೆಯುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಂಗೀತ ಶಿಕ್ಷಕಿ ಶ್ರೀಮತಿ ಭಾಗೇಶ್ವರಿ ಮಯ್ಯ, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಗೆ ಭಾರತ ತಿರುಗೇಟು

ಯು.ಬಿ.ಎನ್.ಡಿ., ಸೆ.29: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್...

ಬಾಸ್ಕೆಟ್ ಬಾಲ್: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಗಣಿತನಗರ, ಸೆ.28: ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ...

ಗುರುಪ್ರಸಾದ್ ಎ. ರವರಿಗೆ ಬೀಳ್ಕೊಡುಗೆ

ಮಣಿಪಾಲ, ಸೆ.28: ಸುಮಾರು 34 ವರ್ಷಗಳಿಂದ, ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಿಕಲ್...

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕಾಪು, ಸೆ.28: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್...
error: Content is protected !!