ಉಡುಪಿ, ಜೂ.21: ಉಡುಪಿ ನಗರಸಭಾ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಯಾವುದೇ ಕಟ್ಟಡ ಹಾಗೂ ರಸ್ತೆ ಕಾಮಗಾರಿಗಾಗಿ ಬಳಸುವ ಸಾಮಾಗ್ರಿಗಳನ್ನು, ಜಲ್ಲಿ, ಕಲ್ಲು, ಮಣ್ಣು, ಹೊಯ್ಗೆ ಇತ್ಯಾದಿಗಳನ್ನು ಶೇಖರಿಸಲು ಅವಕಾಶ ಇರುವುದಿಲ್ಲ. ಮೇಲ್ಕಂಡ ಸಾಮಾಗ್ರಿಗಳನ್ನು ರಸ್ತೆ ಬದಿಯಲ್ಲಿ ದಾಸ್ತಾನು ಮಾಡುವುದರಿಂದ ನಗರದ ಸೌಂದರ್ಯಕ್ಕೆ, ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಹಿನ್ನೆಲೆ, ಸಂಬಂಧಿಸಿದವರು ಕೂಡಲೇ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಕಲಂ 219(1) ರಂತೆ ಮೇಲ್ಕಂಡ ಸಾಮಾಗ್ರಿಗಳನ್ನು ತೆರವುಗೊಳಿಸಲು ಹಾಗೂ ಕಲಂ 219(2) ರಂತೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ರಸ್ತೆ ಬದಿಯಲ್ಲಿರುವ ಕಾಮಗಾರಿ ಸಾಮಾಗ್ರಿಗಳನ್ನು ತೆರವುಗೊಳಿಸಿ
ರಸ್ತೆ ಬದಿಯಲ್ಲಿರುವ ಕಾಮಗಾರಿ ಸಾಮಾಗ್ರಿಗಳನ್ನು ತೆರವುಗೊಳಿಸಿ
Date: