ಕಟಪಾಡಿ, ಜೂ.21: ಪಾಜಕ ಆನಂದತೀರ್ಥ ಪ.ಪೂ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಂದ ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ ಆಯುಷ್ ಇಲಾಖೆ ಉಡುಪಿ, ಇದರ ಸಹಯೋಗದೊಂದಿಗೆ ಯೋಗಾ ಕಾರ್ಯಕ್ರಮ ನಡೆಯಿತು. ಆಯುಷ್ ಇಲಾಖೆ ಉಡುಪಿ ಇದರ ಯೋಗ ತರಬೇತುದಾರರಾದ ರವಿ ಬಂಗೇರ, ಶೈಲಾ ಇವರು ಯೋಗ ಕಾರ್ಯಕ್ರಮ ಉದ್ಘಾಟಿಸಿ, ಮನುಷ್ಯನ ಆರೋಗ್ಯಕರ ಬಾಳಿಗೆ ಯೋಗದ ಉಪಯೋಗ, ಮನಸ್ಸಿನ ಸಮತೋಲನಕ್ಕೆ ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಪ್ರಾಂಶುಪಾಲ ವಿಜಯ್ ಪಿ.ರಾವ್, ಉಪಪ್ರಾಂಶುಪಾಲೆ ಕಮಲಾಕ್ಷಿ ಪ್ರಕಾಶ್, ದೈ,ಶಿ.ಶಿಕ್ಷಕ ವಕ್ಷತ್ ಸಾಲಿಯಾನ್, ಸಂಸ್ಕೃತ ಶಿಕ್ಷಕ ವೀರೇಂದ್ರ ಹೆಗಡೆ ಉಪನ್ಯಾಸಕರಾದ ಮಾನಸಾ ಭಟ್, ಅರ್ಚನಾ ಸಾಮಗ ಸಹಕರಿಸಿದರು, ಕಾಲೇಜು ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಮೇಧಿನಿ ಸ್ವಾಗತಿಸಿ, ಅಶ್ವಿನಿ ತಂತ್ರಿ ವಂದಿಸಿದರು. ಅಕ್ಷಯ್‌ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಪಾಜಕ ಆನಂದತೀರ್ಥ ಪ.ಪೂ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನ
ಪಾಜಕ ಆನಂದತೀರ್ಥ ಪ.ಪೂ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನ
Date: