Home ಸುದ್ಧಿಗಳು ಪ್ರಾದೇಶಿಕ ಸಮತ್ವ ಎಂದರೆ ಪ್ರಮಾಣಾಧಾರಿತ ಅಲ್ಲ; ಸಾಮರ್ಥ್ಯಾಧಾರಿತ: ಪುತ್ತಿಗೆ ಶ್ರೀ

ಸಮತ್ವ ಎಂದರೆ ಪ್ರಮಾಣಾಧಾರಿತ ಅಲ್ಲ; ಸಾಮರ್ಥ್ಯಾಧಾರಿತ: ಪುತ್ತಿಗೆ ಶ್ರೀ

78
0

ಉಡುಪಿ, ಜೂ.21: ಸಮಾಜದಲ್ಲಿ ಸಮತ್ವ, ಸಮಾನತೆ ಇತ್ಯಾದಿಗಳ ವಿಚಾರದಲ್ಲಿ ಅನಗತ್ಯ ಗೊಂದಲಕ್ಕೊಳಗಾಗಿದ್ದೇವೆ. ಆದರೆ ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಸಮತ್ವದ ಸೂತ್ರ ಅತ್ಯಂತ ಅರ್ಥಪೂರ್ಣ ಮತ್ತು ಪ್ರಾಯೋಗಿಕವಾಗಿದೆ. ಸಮತ್ವ ಎಂದರೆ ಪ್ರಮಾಣತ್ವೇನ ಸಮತೆ ಎಂದರ್ಥವಲ್ಲ ; ಸಾಮರ್ಥ್ಯತ್ವೇನ ಸಮತೆಯೇ ಆಗಿದೆ. ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಹಿನ್ನೆಲೆಯಲ್ಲಿ ಯೋಗ ಸೂತ್ರಗಳನ್ನು ವಿಶಿಷ್ಟವಾಗಿ ವಿಶ್ಲೇಷಿಸಿದರು.

ತಾಯಿಯಾದವಳು ತಾನುಮಾಡಿದ ಅಡುಗೆಯನ್ನು ಮನೆಯಲ್ಲಿರುವ ಪುಟ್ಟ ಮಗು, ಬಾಲಕ, ಯುವಕ, ವೃದ್ಧರಿಗೆಲ್ಲ ಬಡಿಸುವಾಗ ಸಮಪ್ರಮಾಣದಲ್ಲಿ ಬಡಿಸಿದರೆ ಸಮರ್ಪಕವಾಗಲ್ಲ. ಕೆಲವರಿಗೆ ಅರ್ಧಹೊಟ್ಟೆ ಕೆಲವರಿಗೆ ಅಜೀರ್ಣವಾಗುಷ್ಟು ಬಡಿಸಿದಂತಾಗುತ್ತದೆ. ಅದೇ ಆಕೆ ಎಲ್ಲರಿಗೂ ಅವರವರ ಜೀರ್ಣ ಸಾಮರ್ಥ್ಯಕ್ಕನುಸಾರವಾಗಿ ಬಡಿಸಿದರೆ ಎಲ್ಲರ ಹೊಟ್ಟೆಯೂ ತುಂಬುತ್ತದೆ ಮತ್ತು ಇದೇ ನಿಜವಾದ ಸಮಾನತೆ ಅಥವಾ ಸಮತ್ವವಾಗಿದೆ. ಆದ್ದರಿಂದ ಯೋಗಾಚಾರ್ಯ ಕೃಷ್ಣನ ಯೋಗ ಸಂದೇಶಗಳು ಪ್ರತಿಯೊಬ್ಬ ವ್ಯಕ್ತಿಯ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಮತ್ತು ಸಾಮಾಜಿಕ ಪ್ರತಿಕೂಲತೆಗಳಿಗೆ ಅತ್ಯಂತ ಸರಿಯಾದ ಔಷಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳಬಲ್ಲವರೇ ಪಂಡಿತರು. ಇದು ಶ್ರೀ ಕೃಷ್ಣನ ಯೋಗಸಂದೇಶ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.