Monday, November 25, 2024
Monday, November 25, 2024

ಮಾಹೆ ಮತ್ತು ಯುಎನ್‌ಬಿ ಸಹಭಾಗಿತ್ವ; ನರ್ಸಿಂಗ್‌ ವಿದ್ಯಾರ್ಥಿಗಳ ಎರಡನೆಯ ತಂಡ ಕೆನಡಕ್ಕೆ

ಮಾಹೆ ಮತ್ತು ಯುಎನ್‌ಬಿ ಸಹಭಾಗಿತ್ವ; ನರ್ಸಿಂಗ್‌ ವಿದ್ಯಾರ್ಥಿಗಳ ಎರಡನೆಯ ತಂಡ ಕೆನಡಕ್ಕೆ

Date:

ಉಡುಪಿ, ಜೂ.21: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮತ್ತು ಕೆನಡದ ಯೂನಿವರ್ಸಿಟಿ ಆಫ್‌ ನ್ಯೂಬ್ರೂನ್ಸ್‌ವಿಕ್‌ಸಹಭಾಗಿತ್ವದ ಭಾಗವಾಗಿ ಮತ್ತು ಯುಎನ್‌ಬಿಯ ಸಮ್ಮರ್‌ ಇನ್ಸಿಟಿಟ್ಯೂಟ್‌ನ ಪ್ರಧಾನ ಘಟಕವಾಗಿರುವ ಮಾಹೆ-ಯುಎನ್‌ಬಿ ಶೈಕ್ಷಣಿಕ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳ ಎರಡನೆಯ ತಂಡವು ಕೆನಡಕ್ಕೆ ತೆರಳಿದ್ದು ಈ ತಂಡದಲ್ಲಿ ಏಳು ಮಂದಿ ವಿದ್ಯಾರ್ಥಿಗಳಿದ್ದಾರೆ. ಈ ಉಪಕ್ರಮದ ಮೂಲಕ ಎರಡು ನರ್ಸಿಂಗ್‌ ಪದವಿಗಳನ್ನು ಪಡೆಯುವ ಅವಕಾಶವನ್ನು ತೆರೆಯುವತ್ತ ಕೇಂದ್ರೀಕೃತವಾಗಿದ್ದು ಈ ಮೂಲಕ ಭಾರತ ಮತ್ತು ಕೆನಡ ಎರಡೂ ದೇಶಗಳಲ್ಲಿ ಔದ್ಯೋಗಿಕ ಅವಕಾಶಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಅರ್ಹರನ್ನಾಗಿಸಲಾಗುತ್ತಿದೆ. ಶೈಕ್ಷಣಿಕ ಸಹಭಾಗಿತ್ವದ ಕಾರ್ಯಕ್ರಮವು ಯುಎನ್‌ಬಿಯ ಫ್ರೆಡಿರಿಕ್ಟನ್‌ ಆವರಣದ ಹ್ಯಾರಿಟ್‌ ಐರ್ವಿಂಗ್‌ ಗ್ರಂಥಾಲಯದಲ್ಲಿ ಜೂನ್‌ 17 ರಂದು ಪ್ರಾಧ್ಯಾಪಕರಾದ ಡಾ. ಲಿನು ಸಾರಾ ಜಾರ್ಜ್‌ ಮತ್ತು ಸಹಾಯಕ ಪ್ರಾಧ್ಯಾಪಕರಾದ ವಿನಿಶ್‌ ವಿ. ಅವರನ್ನು ಮತ್ತು ಎಲ್ಲ ವಿದ್ಯಾರ್ಥಿಗಳನ್ನು ಹಾರ್ಧಿಕವಾಗಿ ಸ್ವಾಗತಿಸಲಾಯಿತು.

ಯುಎನ್‌ಬಿಯ ಅಧ್ಯಕ್ಷ ಮತ್ತು ಉಪಕುಲಪತಿಗಳಾದ ಡಾ. ಪೌಲ್‌ ಮಾಝೆರೊಲ್‌ ಪ್ರಸ್ತುತ ಕಾರ್ಯಕ್ರಮದ ಅಂತರಾಷ್ಟ್ರೀಯ ಮಹತ್ವವನ್ನು ವಿವರಿಸಿದರು ಮತ್ತು ಮಾಹೆ ಹಾಗೂ ಯುಎನ್‌ಬಿ ನಡುವಿನ ಸಹಭಾಗಿತ್ವವು ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ತೆರೆಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ನರ್ಸಿಂಗ್‌ ಲೀಡರ್‌ಶಿಪ್‌ಗೆ ಸಂಬಂಧಿಸಿದ ಕೆನಡದ ಶೆಕ್ಷಣಿಕ ನಿಯತಕಾಲಿಕೆಗಳಲ್ಲಿ ಸಹಪ್ರಕಟಣೆಗೆ ಅವಕಾಶವಿರುವುದರ ಬಗ್ಗೆ ಗಮನಸೆಳೆದರು. ಅಂತರ್ಜಾಲ ಸಂಪರ್ಕದ ಮೂಲಕ ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಶರತ್‌ ಕೆ. ರಾವ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ‘ಆರೋಗ್ಯವಿಜ್ಞಾನದ ಸವಾಲುಗಳನ್ನು ಎದುರಿಸಲು ಗಡಿಗಳನ್ನು ಮೀರಿ, ದೇಶ-ದೇಶಗಳ ಸಹಯಾನದ ಅಗತ್ಯವಿದೆ. ಇಂಥ ಜಂಟಿಕ್ರಿಯಾಶೀಲತೆಯಿಂದ ಸಂಶೋಧನೆಯ ಅವಕಾಶಗಳು ಕೂಡ ಹೆಚ್ಚಲಿವೆ’ ಎಂದರು. ಟೊರಾಂಟೊದಲ್ಲಿ ಭಾರತೀಯ ರಾಯಭಾರ ಕಚೇರಿಯ ಮುಖ್ಯಸ್ಥರಾದ ಸಿದ್ಧಾರ್ಥನಾಥ್‌ ಅವರು ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿಯ ಪ್ರೋತ್ಸಾಹ ಮತ್ತು ಭಾರತೀಯ ಸಮುದಾಯಕ್ಕೆ ನ್ಯೂ ಬ್ರೂನ್ಸ್‌ವಿಕ್‌ ನಗರದ ಸ್ವಾಗತ ಇದ್ದೇ ಇದೆ. ಪ್ರೌಢೋತ್ತರ ಶಿಕ್ಷಣ, ತರಬೇತಿ ಮತ್ತು ಕಾರ್ಮಿಕ ಸಚಿವರಾದ ಗ್ರೆಗ್‌ ಟರ್ನರ್‌ ಅವರು ಸರ್ಕಾರ ನರ್ಸ್‌ಗಳ ನೇಮಕಾತಿಯಲ್ಲಿ ಮತ್ತು ಅವರನ್ನು ಉಳಿಸಿಕೊಳ್ಳುವಲ್ಲಿ ಬದ್ಧವಾಗಿದೆ. ಪ್ರಸ್ತುತ ಉಪಕ್ರಮವು ನರ್ಸ್‌ಗಳಿಗೆ ತತ್‌ಕ್ಷಣ ಉದ್ಯೋಗವನ್ನು ದೊರಕಿಸುವಲ್ಲಿ ಸಹಕಾರಿಯಾಗಲಿದೆ’ ಎಂದರು. ಯುಎನ್‌ಬಿಯ ಡೀನ್‌ ಡಾ. ಲೋರ್ನಾ ಬಟ್ಲರ್‌, ಹೊರಿಜಾನ್‌ ಹೆಲ್ತ್‌ ನೆಟ್‌ವರ್ಕ್‌ನ ಸಿಇಓ ಮತ್ತು ಅಧ್ಯಕ್ಷ ಮಾರ್ಗರೆಟ್‌ ಮೆಲನ್‌ಸನ್‌, ಯುಎನ್‌ಬಿಯ ತಾಂತ್ರಿಕ ದಾಖಲಾತಿಯ ಉಪಾಧ್ಯಕ್ಷ ಮೈಖೆಲ್‌ ರಾಡ್‌, ಶಾನೆಕ್ಸ್‌ ಕಾನೂನುಬದ್ಧ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಕ್ಯಾಥರಿನ್‌ ಮೆಕ್‌ಫೆರ್ಸನ್‌, ನ್ಯೂಬ್ರೂನ್ಸ್‌ವಿಕ್‌ ಸಂಘಟನೆಯ ಹಂಗಾಮಿ ಕಾರ್ಯ ನಿರ್ವಹಣಾಧಿಕಾರಿ ಕ್ಯಾಟ್‌ ಶೆಪರ್ಡ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಯುಎನ್‌ಬಿಯ ಅಧ್ಯಕ್ಷ ಮತ್ತು ಶೆಕ್ಷಣಿಕ ವಿಭಾಗದ ಉಪಾಧ್ಯಕ್ಷ ಡಾ ಪೆಟ್ರಾ ಹೌಫ್‌, ಫ್ರೆಡಿರಿಕ್ಟನ್‌ ವಾರ್ಡ್‌-6 ರ ಕೌನ್ಸಿಲರ್‌ ಎರಿಕ್‌ ಮೆಗಾರಿಟಿ ಯುಎನ್‌ಬಿಯ ನೀತಿಪಾಲಕ ಮತ್ತು ದೇಶೀಯ ಕಾರ್ಯಕ್ರಮಗಳ ಸಹ-ಉಪಾಧ್ಯಕ್ಷ ಚೆನಿನ್‌ ಜೋಸೆಫ್‌ ಅವರು ಉಪಸ್ಥಿತರಿದ್ದರೆ, ಮಣಿಪಾಲ್‌ ಕಾಲೇಜ್‌ ಆಪ್‌ ನರ್ಸಿಂಗ್‌ನ ಡೀನ್‌ ಮತ್ತು ಪ್ರಾಧ್ಯಾಪಕರಾಗಿರುವ ಡಾ. ಜುಡಿತ್‌ ಅಂಜೆಲಿಟಾ ನೊರೊನ್ಹಾ ವಿಡಿಯೋಲಿಂಕ್‌ ಮೂಲಕ ಭಾಗವಹಿಸಿದರು. ಈ ದ್ವಿ-ಪದವಿ ಕಾರ್ಯಕ್ರಮವು ಸಹ- ಶೈಕ್ಷಣಿಕ ಉಪಕ್ರಮದ ಮೂಲಕ ಭಾರತ ಮತ್ತು ಕೆನಡ ದೇಶಗಳ ಆರೋಗ್ಯ ಆರೆಕೆಯ ಕ್ಷೇತ್ರವನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಸಹಕಾರಿಯಾಗಲಿದೆ. ಮಾಹೆಯಲ್ಲಿರುವ ಪ್ರತಿ ತಂಡವು 25 ವಿದ್ಯಾರ್ಥಿಗಳನ್ನು ಒಳಗೊಂಡಿದ್ದು 2022 ರಲ್ಲಿ ಪ್ರಥಮ ತಂಡವು ಅಂಗೀಕೃತವಾಗಿತ್ತು. ಮೂರನೆಯ ತಂಡವು 25 ವಿದ್ಯಾರ್ಥಿಗಳನ್ನು ಒಳಗೊಂಡಿದ್ದು 2024 ರ ಆಗಸ್ಟ್‌ ಸುಮಾರಿಗೆ ಈ ಉಪಕ್ರಮದ ಭಾಗವಾಗಿ ಕೆನಡಕ್ಕೆ ತರಳಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!