Monday, January 20, 2025
Monday, January 20, 2025

ನಾಗರಿಕ ಸಮಾಜ ಮಹಿಳೆಯರ ಬಾಹ್ಯ ಸೌಂದರ್ಯಕ್ಕೆ ಕೊಡುವ ಗೌರವ ಆಂತರಿಕ ಸೌಂದರ್ಯಕ್ಕೆ ಕೂಡುವಂತಾಗಬೇಕು: ಡಾ.ನಿಕೇತನ

ನಾಗರಿಕ ಸಮಾಜ ಮಹಿಳೆಯರ ಬಾಹ್ಯ ಸೌಂದರ್ಯಕ್ಕೆ ಕೊಡುವ ಗೌರವ ಆಂತರಿಕ ಸೌಂದರ್ಯಕ್ಕೆ ಕೂಡುವಂತಾಗಬೇಕು: ಡಾ.ನಿಕೇತನ

Date:

ಉಡುಪಿ, ಜೂ.16: ಟಿ.ಎಸ್.ಆರ್ ಮೊಡೆಲ್ ಮ್ಯಾನೇಜ್ಮೆಂಟ್ ಗ್ರೂಪ್ ನ ವತಿಯಿಂದ ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್ ಹಾಗೂ ಆಭರಣ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಟೀನ್/ ಮಿಸ್/ಮಿಸಸ್ ಕೋಸ್ಟಲ್-2024 ಸೌಂದರ್ಯ ಸ್ಪರ್ಧೆ ಉಡುಪಿಯ ಎಸ್ಸೆನ್ಸಿಯ ಮಣಿಪಾಲ್ ಇನ್ ನ ಗ್ರಾಂಡ್ ಮಿಲಿಯಮ್ ಸಭಾಂಗಣದಲ್ಲಿ ಜರಗಿತು. ಅಂಬಲಪಾಡಿಯ ಜಿ.ಎಸ್ ಶ್ಯಾಮಿಲಿ ಇನ್ಪ್ರಾದ ನಿರ್ದೇಶಕಿ ಶ್ಯಾಮಿಲಿ ಜಿ.ಶಂಕರ್ ಉದ್ಘಾಟಿಸಿ, ಕರಾವಳಿಯ ಭಾಗದ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದ್ದು ಟಿ.ಅರ್ .ಎಸ್ ಮಾಡಲ್ ಮ್ಯಾನೇಜ್ಮೆಂಟ್ ಕಾರ್ಯ ಶ್ಲಾಘನೀಯ. ಭವಿಷ್ಯದಲ್ಲಿ ಈ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಿನುಗುವ ಅವಕಾಶ ಒದಗಿ ಬರಲಿ ಎಂದರು. ಅಧ್ಯಕ್ಷತೆ ವಹಿಸಿದ ಉಡುಪಿಯ ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಡಾ. ನಿಕೇತನ ರವರು ಮಾತನಾಡಿ, ನಾಗರಿಕ ಸಮಾಜ ಮಹಿಳೆಯರ ಬಾಹ್ಯ ಸೌಂದರ್ಯಕ್ಕೆ ಕೊಡುವ ಗಮನವನ್ನು ಆಂತರಿಕ ಸೌಂದರ್ಯಕ್ಕೂ ನೀಡುವಂತಾಗಬೇಕು. ಸ್ತ್ರೀ ಸಮಾನತೆ, ಮಹಿಳಾ ಸಬಲೀಕರಣ ಈ ಕಾಲಘಟ್ಟದಲ್ಲಿ ಅಧುನಿಕ ಜೀವನ ಶೈಲಿಯಿಂದ ಆಂತರಿಕ ಸೌಂದರ್ಯ, ವ್ಯಕ್ತಿತ್ವ ಬೆಳವಣಿಗೆಯನ್ನು ಉದ್ದೀಪನಗೊಳಿಸುವಲ್ಲಿ ಮಹಿಳೆಯರು ವಿಫಲರಾಗುತ್ತಿದ್ದಾರೆ. ಮಹಿಳೆಯರು ತಾವು ಪಡೆದುಕೊಂಡ ವಿದ್ಯೆ, ಆತ್ಮವಿಶ್ವಾಸ ಹಾಗೂ ಛಲದಿಂದ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿ ಕೊಳ್ಳಬೇಕೆಂದರು.

ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ, ಜಯಲಕ್ಷ್ಮೀ ಸಿಲ್ಕ್ಸ್ ನ ನಿರ್ದೇಶಕಿ ಜಯಲಕ್ಷ್ಮೀ ವಿರೇಂದ್ರ ಹೆಗ್ಡೆ, ಚಲನಚಿತ್ರ ನಟರಾದ ಸೂರ್ಯೋದಯ ಪೆರಂಪಳ್ಳಿ, ಸೂರಜ್ ಸನಿಲ್, ನಟಿಯರಾದ ಚಿರಾಶ್ರೀ ಅಂಚನ್, ಸುಕೃತಾ ವಾಗ್ಲೆ, ಶಿಕ್ಷಕಿ ವಂದನಾ ರೈ ಕಾರ್ಕಳ, ಸೌಂದರ್ಯ ಪ್ರದರ್ಶನದ ತರಬೇತುದಾರೆ ನಿಶಿತಾ ಸುವರ್ಣ ಮುಂಬೈ, ರೂಪದರ್ಶಿಗಳಾದ ಸ್ಪೂರ್ತಿ ಡಿ.ಶೆಟ್ಟಿ, ಯಶಸ್ವಿನಿ ದೇವಾಡಿಗ ಉಪಸ್ಥಿತರಿದ್ದರು. ವಿವಿಧ ಕ್ರೇತ್ರಗಳಲ್ಲಿ ಸಾಧನೆಗೈದ ಅಸ್ತಿಕ್ ಅವಿನಾಶ್ ಶೆಟ್ಟಿ, ಯಶಸ್ವಿನಿ ದೇವಾಡಿಗ, ಚಿರಶ್ರೀ ಅಂಚನ್, ಸುಕೃತ ವಾಗ್ಲೆ, ನಿಶಿತಾ ಸುವರ್ಣ, ಸೂರಜ್ ಸನಿಲ್ ಹಾಗೂ ಸ್ಪೂರ್ತಿ ಡಿ.ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಸ್ಪರ್ಧಾ ಕಾರ್ಯಕ್ರಮದ ಯಶಸ್ಸಿನ ರೂವಾರಿಗಳಾದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ತಸ್ನೀನ್ ಅರಾ ಇವರನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾಜಿ ತಾ.ಪಂ.ಸದಸ್ಯ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ, ಜೇಸಿಐ ಇಂಡಿಯಾ ನಿರ್ದೇಶಕ ವೈ ಸುಕುಮಾರ್, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಪಡುಬಿದ್ರಿ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೈ ಸುಧೀರ್ ಕುಮಾರ್, ರಾಗ್ ರಂಗ್ ಕಲ್ಚರಲ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಅಧ್ಯಕ್ಷ ರಚನ್ ಸಾಲ್ಯಾನ್, ನಟ ಅಸ್ತಿಕ್ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ಟೀನ್, ಮಿಸ್, ಮಿಸೆಸ್ ಈ ಮೂರು ವಿಭಾಗಗಳಲ್ಲಿ ಸೌಂದರ್ಯ ಸ್ವರ್ಧೆ ನಡೆದಿದ್ದು, ಟೀನ್ ಕೋಸ್ಟಲ್ ವಿಭಾಗದ ವಿಜೇತೆ ಸಾನ್ವಿ, ಪ್ರಥಮ ರನ್ನರ್ ಅಪ್ ದಿಶಾ ರಾಣಿ, ದ್ವಿತೀಯ ರನ್ನರ್ ಅಫ್ ರಕ್ಷಿತಾ ಪಡೆದರು. ಮಿಸ್ ಕೋಸ್ಟಲ್ ವಿಭಾಗದ ವಿನ್ನರ್ ಅಗಿ ಸುಶ್ಮಿತಾ ಆಚಾರ್ಯ, ಪ್ರಥಮ ರನ್ನರ್ ಅಫ್ ಸಾಯಿ ಶ್ರುತಿ ಪಿಲಿಕಜೆ, ದ್ವಿತೀಯ ರನ್ನರ್ ಅಫ್ ಲಿಂಡಾ ಲೂವಿಸ್,
ಮಿಸೆಸ್ ಕೋಸ್ಟಲ್ ವಿಭಾಗದ ವಿನ್ನರ್ ಚೈತ್ರ ಪ್ರಮೋದ್, ಪ್ರಧಮ ರನ್ನರ್ ಅನೋಲ ಕೆ.ಜೆ., ದ್ವಿತೀಯ ರನ್ನರ್ ಅಫ್ ಪ್ರಿಯಾಂಕಾ ಸುರತ್ಕಲ್ ಇವರುಗಳಿಗೆ ಕಿರೀಟ ತೊಡಿಸಿ ಗೌರವಿಸಲಾಯಿತು. ನಿಶಿತಾ ಸುವರ್ಣ ಮಂಗಳೂರು, ಸೂರಾಜ್ ಸನಿಲ್ ಮಂಗಳೂರು, ಸ್ಪೂರ್ತಿ ಶೆಟ್ಟಿ ಉಡುಪಿ ತೀರ್ಪುಗಾರರಾಗಿ ಸಹಕರಿಸಿದರು. ರಮೇಶ್ ಕಾಂಚನ್ ಸ್ವಾಗತಿಸಿ, ತಸ್ನೀನ್ ಅರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜು ರೈ ಮೂಳೂರು, ಪಲ್ಲವಿ ಮಂಗಳೂರು ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!