Wednesday, October 9, 2024
Wednesday, October 9, 2024

ಪುತ್ತೂರು: ಯಕ್ಷಗಾನ ತರಬೇತಿಗೆ ಚಾಲನೆ

ಪುತ್ತೂರು: ಯಕ್ಷಗಾನ ತರಬೇತಿಗೆ ಚಾಲನೆ

Date:

ಉಡುಪಿ, ಜೂ.೩: ಉಡುಪಿ ಪುತ್ತೂರು ಶ್ರೀ ಭಗವತೀ ಯಕ್ಷಕಲಾ ಬಳಗದ ವತಿಯಿಂದ ತೆಂಕುತಿಟ್ಟು ಯಕ್ಷಗಾನ ಹೆಜ್ಜೆಗಾರಿಕೆ ತರಬೇತಿಯ ನೂತನ ತರಗತಿಯು ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರೀ ದೇವಳದ ಶ್ರೀ ಭಗವತೀ ಸಭಾಗ್ರಹದಲ್ಲಿ ಪ್ರಾರಂಭಗೊಂಡಿತು. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ ತರಬೇತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಭಗವತೀ ಯಕ್ಷಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಹಾಗು ಯಕ್ಷಗುರು ರಕ್ಷಿತ್ ಪಡ್ರೆ, ದೇವಳದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ಭಟ್, ಕಲಾ ಬಳಗದ ಉಪಾಧ್ಯಕ್ಷ ಸುಬ್ರಹ್ಮಣ್ಯ ಜೋಷಿ, ಸಾಂಸ್ಕೃತಿಕ ಕಾರ್ಯದರ್ಶಿ ರವಿನಂದನ್ ಭಟ್, ಮೋಹನ ಉಡುಪ, ಶ್ರೀ ಭಗವತೀ ಯಕ್ಷಕಲಾ ಬಳಗದ ಬಡಗು ತರಗತಿಯ ಸಂಚಾಲಕಿ ನಿರುಪಮಾ ಪ್ರಮೋದ್, ತೆಂಕುತಿಟ್ಟು ಗುರು ಪ್ರಣಮ್ಯ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು. ಉಭಯ ತಿಟ್ಟಗಳಲ್ಲಿ ಹೆಜ್ಜೆಗಾರಿಕೆ ಮತ್ತು ಹಿಮ್ಮೇಳ ತರಗತಿಗಳಲ್ಲಿ ಈಗಾಗಲೇ 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದಾರೆ. ತೆಂಕುತಿಟ್ಟು ಹೆಜ್ಜೆಗಾರಿಕೆ ಗುರುಗಳಾಗಿ ಹನುಮಗಿರಿ ಮೇಳದ ಪ್ರಖ್ಯಾತ ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ, ಬಡಗುತಿಟ್ಟು ಹಿಮ್ಮೇಳ ಮತ್ತು ಹೆಜ್ಜೆಗಾರಿಕೆ ಗುರುಗಳು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ತೆಂಕುತಿಟ್ಟು ಹಿಮ್ಮೇಳ ಗುರುಗಳು ರಾಮ್ ಪ್ರಕಾಶ್ ಕಲ್ಲೂರಾಯ ತರಬೇತಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ಕ್ಕೆ ನೂತನ ಫಾರ್ಮಸಿ ಪದವಿ ಕಾಲೇಜು ಸೇರ್ಪಡೆ

ಮೂಡುಬಿದಿರೆ, ಅ.9: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು ತನ್ನಲ್ಲಿರುವ 20 ವಿವಿಧ...

ಪ್ರತಿಭೆಯನ್ನು ಗ್ರಹಿಸಿ ಅಭಿನಂದಿಸುವ ಮನೋಭಾವ ಬೆಳೆಸಿಕೊಳ್ಳಿ: ನರೇಂದ್ರ ಎಸ್ ಗಂಗೊಳ್ಳಿ

ಗಂಗೊಳ್ಳಿ, ಅ.9: ಮನುಷ್ಯನ ಹೊರನೋಟದ ಲಕ್ಷಣಗಳಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಮೂರ್ಖತನ....

ವಿಜ್ಞಾನ ಗ್ಯಾಲರಿಯಲ್ಲಿ ‘ಸೈ 650’ ಪ್ರದರ್ಶನ ಅನಾವರಣ

ಬೆಂಗಳೂರು, ಅ.9: ವಿಜ್ಞಾನದ ಹಲವು ಕುತೂಹಲಕಾರಿ ಸಂಗತಿಗಳು ಬೆಂಗಳೂರಿನ ವಿಜ್ಞಾನ ಗ್ಯಾಲರಿಯಲ್ಲಿ...

ಇ-ಖಾತಾ ಸಂಬಂಧಿತ ಗೊಂದಲಗಳಿಗೆ ವಾರದೊಳಗೆ ಪರಿಹಾರ

ಬೆಂಗಳೂರು, ಅ.8: ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದು, ಅವುಗಳನ್ನು ಒಂದು ವಾರದಲ್ಲಿ...
error: Content is protected !!