ಮಣಿಪಾಲ, ಜೂ.3: ಖ್ಯಾತ ಸಂತಾನೋತ್ಪತ್ತಿ ಔಷಧಿ ತಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಪ್ರತಾಪ್ ಕುಮಾರ್ ಎನ್ ಈಗ ಪೂರ್ಣ ಸಮಯಕ್ಕೆ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಡಾ ರಾಮದಾಸ್ ಪೈ ಬ್ಲಾಕ್‌ನಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. 3ನೇ ಜೂನ್ 2024 ರಿಂದ ಜಾರಿಗೆ ಬರುವಂತೆ ಅವರು ಡಾ. ರಾಮದಾಸ್ ಪೈ ಬ್ಲಾಕ್‌ನಲ್ಲಿ ಪೂರ್ವನಿಗದಿ (ಅಪ್ಪೋಯಿಂಟ್ಮೆಂಟ್) ಮೂಲಕ ತಮ್ಮ ಪರಿಣಿತ ಸೇವೆಗಳನ್ನು ನೀಡಲಿದ್ದಾರೆ. ತಮ್ಮ ಅಸಾಧಾರಣ ಪರಿಣತಿ ಮತ್ತು ಸಹಾನುಭೂತಿಯ ಆರೈಕೆಗಾಗಿ ಗುರುತಿಸಲ್ಪಟ್ಟಿರುವ ಡಾ. ಪ್ರತಾಪ್ ಕುಮಾರ್ ಅವರು ಟೆಸ್ಟ್ ಟ್ಯೂಬ್ ಬೇಬಿ (ಐವಿಎಫ್) ಕಾರ್ಯವಿಧಾನಗಳಲ್ಲಿ ತಮ್ಮ ವಿಶೇಷ ಕೌಶಲ್ಯಗಳ ಮೂಲಕ 10,000 ಕ್ಕೂ ಹೆಚ್ಚು ಶಿಶುಗಳ ಜನನವನ್ನು ಸುಗಮಗೊಳಿಸಿರುವ ಗಮನಾರ್ಹ ದಾಖಲೆಯನ್ನು ಹೊಂದಿದ್ದಾರೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅವರ ಉಪಸ್ಥಿತಿಯು ಸಂತಾನೋತ್ಪತ್ತಿ (ಬಂಜೆತನಕ್ಕೆ ಚಿಕಿತ್ಸೆ) ಸಹಾಯವನ್ನು ಬಯಸುವ ಹಲವಾರು ದಂಪತಿಗಳಿಗೆ ಅಪಾರ ಸಂತೋಷ ಮತ್ತು ಭರವಸೆಯನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಡಾ. ಪ್ರತಾಪ್ ಕುಮಾರ್ ಅವರ ಪೂರ್ಣ ಸಮಯದ ಲಭ್ಯತೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಡಾ. ಪ್ರತಾಪ್ ಅವರು ಪ್ರಖ್ಯಾತ ಸಂತಾನೋತ್ಪತ್ತಿ ಔಷಧಿ ಮತ್ತು ಶಸ್ತ್ರಚಿಕಿತ್ಸಕರಾಗಿದ್ದಾರೆ, ಅವರ ಪರಿಣತಿಯು ಮಕ್ಕಳನ್ನು ಬಯಸುವ ಅಸಂಖ್ಯಾತ ದಂಪತಿಗಳಿಗೆ ನಗುವನ್ನು ತಂದಿದೆ. ಅವರು ಈಗಕಸ್ತೂರ್ಬಾ ಆಸ್ಪತ್ರೆಯ ಡಾ. ರಾಮದಾಸ್ ಪೈ ಬ್ಲಾಕ್ ಸಂಪೂರ್ಣವಾಗಿ ಲಭ್ಯವಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9:00 ರಿಂದ 12:00 ಮತ್ತು 3:00 ರಿಂದ 4:00 ವರೆಗೆ ಪೂರ್ವ ನಿಗದಿ (ಅಪ್ಪೋಯಿಂಟ್ಮೆಂಟ್) ಮೂಲಕ ಡಾ. ಪ್ರತಾಪ್ ಕುಮಾರ್ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ. ಸಮಯ ನಿಗದಿಪಡಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂರವಾಣಿ: 6364469750 ವೆಬ್‌ಸೈಟ್: http://www.khmanipal.com