ಉಡುಪಿ, ಜೂ.3: ಯಕ್ಷಗಾನ ಕಲಾವಿದರ ವಾರ್ಷಿಕ ಕೂಟ-2024ರ ನಿಮಿತ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಯಕ್ಷಗಾನ ಕಲಾರಂಗ ಇವರ ಜಂಟಿ ಆಶ್ರಯದಲ್ಲಿ ಯಕ್ಷಗಾನ ಕಲಾವಿದರ ಆರೋಗ್ಯ ತಪಾಸಣಾ ಶಿಬಿರವನ್ನು ಉಡುಪಿ ಕೃಷ್ಣ ಮಠ ರಾಜಾಂಗಣದಲ್ಲಿ ನಡೆಯಿತು. ಕೆ. ಎಂ. ಸಿ ಮಣಿಪಾಲದ ತಜ್ಞ ವೈದ್ಯರಾದ ಡಾ. ಸಂಜಯ್ ಕಿಣಿ, ಡಾ. ಆದರ್ಶ ಹಾಗೂ ಡಾ. ಸಮಕ್ಷ ಗೋಯಲ್ ಯಕ್ಷಗಾನ ಕಲಾವಿದರ ಆರೋಗ್ಯ ತಪಾಸಣೆ ನಡೆಸಿದರು. ಸುಮಾರು 160 ಕಲಾವಿದರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಉಡುಪಿ: ಯಕ್ಷಗಾನ ಕಲಾವಿದರ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಯಕ್ಷಗಾನ ಕಲಾವಿದರ ಆರೋಗ್ಯ ತಪಾಸಣಾ ಶಿಬಿರ
Date: