ಉಡುಪಿ, ಜೂ.1: ಜಿಲ್ಲಾಡಳಿತದಿಂದ ಸ್ವಸ್ತಿಕ್ ಎನ್‌ಕ್ಲೇವ್ ಅಪಾರ್ಟ್ಮೆಂಟ್ ಅನ್ನು ತಂಬಾಕು ಮುಕ್ತ ಅಪಾರ್ಟ್ಮೆಂಟ್ ಎಂದು ಗುರುತಿಸಿದ್ದು, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿಯಲ್ಲಿ, ಅವರಿಗೆ ಮೆಚ್ಚುಗೆ ಪ್ರಮಾಣ ಪತ್ರ (ಅಪ್ರಿಸಿಯೇಷನ್ ಸರ್ಟಿಫಿಕೇಟ್) ವನ್ನು ವಿತರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿ.ಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸ್ವಸ್ತಿಕ್ ಎನ್‌ಕ್ಲೇವ್ ತಂಬಾಕು ಮುಕ್ತ ಅಪಾರ್ಟ್ಮೆಂಟ್; ಡಿಸಿಯವರಿಂದ ಮೆಚ್ಚುಗೆ ಪ್ರಮಾಣ ಪತ್ರ

ಸ್ವಸ್ತಿಕ್ ಎನ್‌ಕ್ಲೇವ್ ತಂಬಾಕು ಮುಕ್ತ ಅಪಾರ್ಟ್ಮೆಂಟ್; ಡಿಸಿಯವರಿಂದ ಮೆಚ್ಚುಗೆ ಪ್ರಮಾಣ ಪತ್ರ
Date: