ಮಣಿಪಾಲ, ಮೇ 31: ವಿಶ್ವ ತಂಬಾಕು ರಹಿತ ದಿನ -2024 ಇದರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ. ಎಂ. ಸಿ. ಮಣಿಪಾಲ ಇವರ ಸಹಯೋಗದೊಂದಿಗೆ ರಚಿಸಿದ ಕಲಾಕೃತಿಯನ್ನು ಕೆ. ಎಂ. ಸಿ. ಯ ಅಸೋಸಿಯೆಟ್ ಡೀನ್ ಡಾ.ಕೃಷ್ಣಾನಂದ ಪ್ರಭು ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಅವರು ಅನಾವರಣಗೊಳಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಮುರಳೀಧರ್ ಎಂ. ಕುಲಕರ್ಣಿ ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹೀರೆಬೆಟ್ಟು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯ ಬಗ್ಗೆ ವಿವರಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಡಾ. ವೀಣಾ ಜಿ. ಕಾಮತ್, ಡಾ. ಚೈತ್ರಾ ರಾವ್, ಡಾ. ಸ್ನೇಹಾ ಕಾಮತ್, ಡಾ. ಈಶ್ವರಿ, ಡಾ. ಯಶ್ ಅಲೋಕ್, ಡಾ.ಅಖಿಲಾ ಡಿ., ಡಾ. ಮಂಜುಳ, ಡಾ. ಅರುಣ್‌ದಾಸ್, ಸಮುದಾಯ ವೈದ್ಯಕೀಯ ವಿಭಾಗದ ಬೋಧಕೇತರ ಸಿಬ್ಬಂದಿಗಳು, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಲಾಕೃತಿಯಲ್ಲಿ – ತಂಬಾಕು ಉದ್ಯಮವು ಯುವಜನತೆಯನ್ನು ಯಾವ ರೀತಿ ತನ್ನ ಆಮಿಷಕ್ಕೆ ಒಳಪಡಿಸುತ್ತಿದೆ ಎಂಬುದನ್ನು ಭಯಾನಕವಾಗಿ ಬಿಂಬಿಸಲಾಗಿದೆ. ತಂಬಾಕಿನ ಸೇವನೆಯಿಂದ, ಜಗಿಯುವುದರಿಂದ ಬಾಯಿಯ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಶ್ವಾಶಕೋಶದ ಕ್ಯಾನ್ಸರ್, ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ತಂಬಾಕಿನ ಸೇವನೆಯಿಂದಾಗಿ ಪ್ರತಿವರ್ಷ ಎಂಟು ಮಿಲಿಯನ್ ಜನರು ಸಾವನಪ್ಪುತ್ತಿರುವುದು ದುಖ:ಕರ ವಿಷಯವಾಗಿದೆ. ಕಲಾಕೃತಿಯನ್ನು ಒಂದು ವಾರಗಳ ಕಾಲ ಮಣಿಪಾಲ ಮತ್ತು ಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾಗುವುದು ಎಂದು ಕಲಾವಿದರು ತಿಳಿಸಿದ್ದಾರೆ.
ಯುವಕರೇ ತಂಬಾಕು ಉದ್ಯಮದ ಆಮಿಷಕ್ಕೆ ಬಲಿಯಾಗಬೇಡಿ
ಯುವಕರೇ ತಂಬಾಕು ಉದ್ಯಮದ ಆಮಿಷಕ್ಕೆ ಬಲಿಯಾಗಬೇಡಿ
Date: