ಕಲ್ಯಾಣಪುರ, ಮೇ 30: ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ವಸಂತಪೂಜೆ, ಪಲ್ಲಕಿ ಉತ್ಸವ, ಅಷ್ಠಾವಧಾನ ಸೇವೆ, ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ, ಪಂಚಾಮೃತ ಅಭಿಷೇಕ, ಶತಕಲಶಾಭಿಷೇಕ, ಸಾನಿಧ್ಯ ಹವನ, ವಿಶೇಷ ಹೂವಿನ ಅಲಂಕಾರ ಪೂಜೆ ಸಹಿತ ಧಾರ್ಮಿಕ ವಿಧಿವಿಧಾನಗಳು ವೇದಮೂರ್ತಿ ಕಾಶೀನಾಥ್ ಭಟ್ ಮಾರ್ಗದರ್ಶನದಲ್ಲಿ ನಡೆಯಿತು. ಪೂಜಾ ವಿಧಾನಗಳನ್ನು ರಾಮಚಂದ್ರ ಅವಧಾನಿ, ಗಣೇಶ ಭಟ್, ಜಯದೇವ ಭಟ್, ಪವನ್ ಭಟ್, ಜಯದೇವ ಪುರಾಣಿಕ್, ಮಹೇಶ್ ಭಟ್ ನಡೆಸಿಕೊಟ್ಟರು. ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ 6 ಲಕ್ಷ ರೂ ದೇಣಿಗೆಯನ್ನು ನೀಡಲಾಯಿತು. ನೂರಾರು ಭಕ್ತರು ಉಪಸ್ಥಿತರಿದ್ದರು.
ಕಲ್ಯಾಣಪುರ: ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ವಸಂತಪೂಜೆ

ಕಲ್ಯಾಣಪುರ: ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ವಸಂತಪೂಜೆ
Date: