Friday, October 25, 2024
Friday, October 25, 2024

ಅವಕಾಶಗಳು ಹೆಚ್ಚಾದಾಗ ಕಲೆಯಲ್ಲಿ ಪ್ರಬುದ್ಧತೆ: ಭಾಗವತ ಹರೀಶ್ ಕಾವಡಿ

ಅವಕಾಶಗಳು ಹೆಚ್ಚಾದಾಗ ಕಲೆಯಲ್ಲಿ ಪ್ರಬುದ್ಧತೆ: ಭಾಗವತ ಹರೀಶ್ ಕಾವಡಿ

Date:

ಕೋಟ, ಮೇ 30: ಸಾಂಸ್ಕೃತಿಕ ಲೋಕದ ಭವಿಷ್ಯದ ರೂವಾರಿಗಳು ತೆಕ್ಕಟ್ಟೆ ಸಂಸ್ಥೆಯಲ್ಲಿ ದಿನದಿನವೂ ವೃದ್ಧಿಗೊಳ್ಳುತ್ತಿದ್ದಾರೆ. ಯಕ್ಷಕಲೆಯಲ್ಲಿನ ವಿವಿಧ ಆಯಾಮಗಳಲ್ಲಿ ಕರಗತಗೊಂಡಿರುವ ಯಶಸ್ವಿ ಸಂಸ್ಥೆಯ ಪುಟಾಣಿಗಳು ಕರಾವಳಿ ಭಾಗದಲ್ಲಿ ಮನೆ ಮಾತಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುತ್ತಿದೆ. ರಂಗ ಒದಗುತ್ತಾ ಹೋದಾಗ ಮಕ್ಕಳಲ್ಲಿನ ಕಲೆ ಪ್ರಬುದ್ಧಗೊಳ್ಳುತ್ತದೆ ಎಂದು ಭಾಗವತ ಹರೀಶ್ ಕಾವಡಿ ಹೇಳಿದರು. ಮಣೂರು ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇಗುಲದ ೨ನೇ ವರ್ಷದ ಪ್ರತಿಷ್ಠಾ ವರ್ದಂತಿ ಕಾರ್ಯಕ್ರಮದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ 30ನೇಯ ಕಾರ್ಯಕ್ರಮವಾಗಿ ಮಕ್ಕಳ ಯುಗಳ ಸಂವಾದದಲ್ಲಿ ಆಡಳಿತ ಮಂಡಳಿಯ ರಘುರಾಮ ಶೆಟ್ಟಿಯವರನ್ನು ಗೌರವಿಸಿ ಅವರು ಮಾತನಾಡಿದರು. ಅತಿಥಿಗಳಾಗಿ ವಿಜಯ್ ಶೆಟ್ಟಿ, ಸುರೇಶ್, ಚಂಡೆಯ ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು. ಲಂಕಾದಹನದ ಹನುಮಂತ-ಲಂಕಿಣಿ, ದ್ರೌಪದಿ ಪ್ರತಾಪದ ದ್ರೌಪದಿ-ಅರ್ಜುನ, ಕೃಷ್ಣಾರ್ಜುನದ ಸುಭದ್ರೆ-ರುಕ್ಮಿಣಿ, ಸುಧನ್ವಾರ್ಜುನದ ಸುಧನ್ವ-ಪ್ರಭಾವತಿ, ಅಭಿಮನ್ಯು-ಸುಭದ್ರೆ, ಭೀಮ-ಅರ್ಜುನರ ಸಂವಾದಗಳು ಯುಗಳ ಸಂವಾದವಾಗಿ ರಂಗ ಪ್ರಸ್ತುತಿಗೊಂಡಿತು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂದಿನ (25-10-2024) ಚಿನ್ನದ ದರ

Gold 22 CT- Rs. 7295 Gold 24 CT- Rs. 7808 Silver-...

ರಕ್ತದಾನ ಶ್ರೇಷ್ಠದಾನ: ಡಾ. ಗಣನಾಥ ಎಕ್ಕಾರು

ಉಡುಪಿ, ಅ.25: ಯಾವುದೇ ದಾನಕ್ಕಿಂತಲೂ ರಕ್ತದಾನ ಶ್ರೇಷ್ಠದಾನವಾಗಿದ್ದು, ಅಪಾಯದಲ್ಲಿರುವವರ ಅಮೂಲ್ಯ ಜೀವವನ್ನು...

ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಂದಿಗೆ ಸಹಕರಿಸಿ

ಉಡುಪಿ, ಅ.25: ಉಡುಪಿ ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ...

ಕಟ್ಟಡಗಳ ಭಗ್ನ ಅವಶೇಷಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚನೆ

ಉಡುಪಿ, ಅ.25: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ...
error: Content is protected !!