ಕೋಟ, ಮೇ 27: ಸ್ನೇಹ ಕೂಟ ಮಣೂರು ಇದರ ಮೇ ತಿಂಗಳ ಸ್ನೇಹಕೂಟದ ಭಾಗವಾಗಿ ಮಹಿಳೆಯರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಮಣೂರು ನೀಲಾವರ ಸುರೇಂದ್ರ ಅಡಿಗರ ಮನೆಯಲ್ಲಿ ಭಾನುವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಆಯುಷ್ ವಿಭಾಗದ ಮುಖ್ಯಸ್ಥರಾದ ಸ್ವಾತಿ ಜಿ ಶೇಟ್ ಮಾರ್ಗದರ್ಶನ ನೀಡಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು. ಸ್ನೇಹಕೂಟ ಸಂಚಾಲಕಿ ಭಾರತಿ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ವನಿತಾ ಉಪಾಧ್ಯ ವರದಿಯನ್ನು ವಾಚಿಸಿದರು. ಸುಜಾತ ಬಾಯಿರಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವಿನಯ ಉಡುಪ ವಂದಿಸಿದರು. ಗಾಯತ್ರಿ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ಮಣೂರು: ಮಾಹಿತಿ ಕಾರ್ಯಾಗಾರ

ಮಣೂರು: ಮಾಹಿತಿ ಕಾರ್ಯಾಗಾರ
Date: