Friday, October 25, 2024
Friday, October 25, 2024

ಚಾರ: ಬಾಲಗೋಕುಲ ಉದ್ಘಾಟನೆ

ಚಾರ: ಬಾಲಗೋಕುಲ ಉದ್ಘಾಟನೆ

Date:

ಹೆಬ್ರಿ, ಮೇ 27: ಗ್ರಾಮ ವಿಕಾಸ ಘಟಕ ಹೆಬ್ರಿ ತಾಲೂಕಿನ ಚಾರ ಗ್ರಾಮದ ಚಂದ್ರನಾಥ ಸ್ವಾಮಿ ಭಜನಾ ಮಂಡಳಿ ಮಂದಿರದಲ್ಲಿ ಬಾಲಗೋಕುಲವನ್ನು ನಂದಿತಾ ಕಾಮತ್ ಭಾರತ ಮಾತೆಯ ಭಾವಚಿತ್ರದ ಮುಂದೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಗ್ರಾಮ ಗ್ರಾಮಗಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕಾರ್ಯ ಆಗಬೇಕಿದೆ. ಪ್ರಸ್ತುತ ಸಮಾಜದ ವಿದ್ಯಾಮಾನವನ್ನು ಅವಲೋಕಿಸಿದಾಗ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಇಚ್ಚಾಶಕ್ತಿ ಬಾಲ್ಯದಿಂದಲೇ ಬೆಳೆಸಬೇಕಿದೆ. ಈ ಒಳ್ಳೆಯ ಕಾರ್ಯಚಟುವಟಿಕೆಗಳಿಗೆ ನಮ್ಮ ಸಹಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಚಾರ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿದರು.

ಅಮೃತ ಭಾರತಿ ವಿದ್ಯಾಲಯದ ಉಪಮುಖ್ಯೋಪಾಧ್ಯಾಯ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ್ ಹೈಕಾಡಿ ಮಾತನಾಡಿ, ಗ್ರಾಮದಲ್ಲಿ ಬಾಲಗೋಕುಲ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಅತ್ಯಂತ ವೇಗವಾಗಿ ಪ್ರಾರಂಭಿಸಬೇಕಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ತಮ್ಮ ಬಗೆಗೆ ಜಾಗೃತೆಯ ಭಾವದ ಅರಿವು ಬೆಳೆಸಬೇಕು. ಇದರಿಂದ ಪೋಷಕರ ಜವಾಬ್ದಾರಿ ಸ್ವಲ್ಪ ನಿರಾಳವಾಗುತ್ತದೆ. ಗ್ರಾಮದ ತಾಯಂದಿರಿಗೆ ಬಾಲಗೋಕುಲದ ಪರಿಕಲ್ಪನೆಯ ಕಾರ್ಯಚಟುವಟಿಕೆಯ ತಿಳುವಳಿಕೆ ನೀಡಬೇಕಿದೆ ಎಂದರು. ಮಂಗಳೂರು ಮಹಿಳಾ ವಿಭಾಗದ ಬಾಲಗೋಕುಲ ಸಹ ಸಂಯೋಜಕಿ ರಮಿತ ಶೈಲೇಂದ್ರ ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ದೂರವಿರಿಸಲು, ಸಾಂಪ್ರದಾಯಿಕ ಆಟಗಳಲ್ಲಿ ತಲ್ಲೀನವಾಗಿಸಲು ಬಾಲಗೋಕುಲ ಸಹಕರಿಸುತ್ತದೆ ಎಂದರು.

ಗ್ರಾಮ ವಿಕಾಸ ಹೆಬ್ರಿ ತಾಲೂಕು ಸಂಯೋಜಕರಾದ ರಾಘವೇಂದ್ರ ಭಟ್, ಹೆಬ್ರಿ ತಾಲೂಕು ಮಹಿಳಾ ವಿಭಾಗದ ಸಂಯೋಜಕರಾದ ವೀಣಾ ಆರ್ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷೆ ಜ್ಯೋತಿ, ನಂದಿತಾ ಕಾಮತ್, ಬಾಲಗೋಕುಲ ಕಾರ್ಕಳ ವಿಭಾಗದ ಪ್ರಮುಖರಾದ ಮಾತಾಜಿ ಸವಿತಾ, ಚಾರ ಪಂಚಾಯತ್ ಸದಸ್ಯೆ ಶಶಿಕಲಾ ಮತ್ತು ಧರ್ಮಸ್ಥಳ ಸಂಘದ ಸೇವಾ ಕಾರ್ಯಕರ್ತೆ ಲತಾ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು. ನಚಿಕೇತ ವಿದ್ಯಾಲಯ ಬೈಲೂರು ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಮಯ್ಯ ಚಾರ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.26: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಜಾಗೃತಿ ನಡಿಗೆ

ಉಡುಪಿ, ಅ.25: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಉಪಶಾಮಾಕ ಆರೈಕೆ ದಿನದ...

ತಾಲೂಕು ಕ್ರೀಡಾಕೂಟ: ಕಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಾಧನೆ

ಉಡುಪಿ, ಅ.25: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರ್ಲಾಲ್ ಸೂಡಿ ಇಲ್ಲಿ...

ಲಕ್ಷ್ಮಣ ಕುಡ್ವ ಪಿ. ಇವರಿಗೆ ಪಿ.ಎಚ್‌ಡಿ

ಉಡುಪಿ, ಅ.25: ಲಕ್ಷ್ಮಣ ಕುಡ್ವ ಪಿ. ಅವರು ಡಾ. ಗೋಪಿನಾಥ ನಾಯಕ್...

ಗೀತಾ ಯೋಗ ಸಂಗಮ: ಪುತ್ತಿಗೆ ಶ್ರೀ

ಉಡುಪಿ, ಅ.25: ಭಗವದ್ಗೀತೆಯಲ್ಲಿ‌ ಕೃಷ್ಣ ಹೇಳಿದ ಯೋಗಸೂತ್ರಗಳನ್ನು ಅರ್ಜುನನಂತೆ ಬಾಬಾ ರಾಮ್...
error: Content is protected !!