ಉದ್ಯಾವರ: ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವರ್ಷದ ಹರ್ಷ ನೂರರ್ವತ್ತೊಂದು ಕಾರ್ಯಕ್ರಮ ಮಾರ್ಚ್ 04, 05. 06 ರಂದು ಪ್ರತಿದಿನ ಬೆಳಿಗ್ಗೆ ಗಂಟೆ 9.30ರಿಂದ ಜರಗಲಿದೆ. ತಾ. 04.03.2022 ಶುಕ್ರವಾರ ಬೆಳಿಗ್ಗೆ ಗಂಟೆ 9.30ಕ್ಕೆ ಶಾಲಾ ಧ್ವಜಾರೋಹಣವನ್ನು ಶಾಲಾ ಸಂಚಾಲಕರಾದ ಸುರೇಶ್ ಶೆಣೈ ಮಾಡಲಿದ್ದಾರೆ.
ಆ ನಂತರ ಜರಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಗಣಪತಿ ಕಾರಂತ್ ಅವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೆ. ಸದಾಶಿವ ರಾವ್ ಆಗಮಿಸಲಿದ್ದಾರೆ.
ಶಾಲಾ ಹಳೆ ವಿದ್ಯಾರ್ಥಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಶುಭಾಶಂಸನೆಯನ್ನುಗೈಯಲಿದ್ದಾರೆ. ನಂತರ 1ನೇ ತರಗತಿಯಿಂದ 4ನೇ ತರಗತಿಯವರೆಗೆ ಬಹುಮಾನ ವಿತರಣೆ ಮತ್ತು ಪ್ರತಿಭಾ ಪ್ರದರ್ಶನ ಜರಗಲಿದೆ.
ತಾ.5.3.2022 ಶನಿವಾರ ಬೆಳಿಗ್ಗೆ ಗಂಟೆ 9.30ಕ್ಕೆ ಜರಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಕಡೆಕಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ನಿಕೇತನ ವಹಿಸಿಕೊಳ್ಳಲಿದ್ದಾರೆ.
ಶಾಲಾ ಹಳೆ ವಿದ್ಯಾರ್ಥಿ ಲೆಕ್ಕ ಪರಿಶೋಧಕ ಸಿ.ಎ. ಸುಭಾಶ್ಚಂದ್ರ ಸಾಲಿಯಾನ್ ಶುಭಾಶಂಸನೆಗೈಯಲಿದ್ದಾರೆ. ನಂತರ 5ನೇ ತರಗತಿಯಿಂದ 7ನೇ ತರಗತಿ ತನಕ ಮಕ್ಕಳ ಬಹುಮಾನ ವಿತರಣೆ, ನೃತ್ಯ ಕಾರ್ಯಕ್ರಮ ಮತ್ತು “ಬೆಳಕು ಹಂಚಿದ ಬಾಲಕ” ಅಂಬೇಡ್ಕರ್ ಬಾಲ್ಯದ ಬಗ್ಗೆಯ ನಾಟಕ ಜರಗಲಿದೆ.
ತಾ.06.03.2022 ಭಾನುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಜರಗುವ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಗಣಪತಿ ಕಾರಂತ್ ಸಹ ಶಿಕ್ಷಕಿಯರಾದ ರತ್ನಾವತಿ, ರಾಜೀವಿ ಇವರಿಗೆ ಸಂಮಾನ ಕಾರ್ಯಕ್ರಮ ಮತ್ತು 2019-20, 2020-21, 2021-22 ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮ ಜರಗಲಿದೆ.
ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ತ್ರಿವೇಣಿ ವೇಣುಗೋಪಾಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಡಯೆಟ್ ಉಪ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಆಗಮಿಸಲಿದ್ದಾರೆ. ಹಳೆ ವಿದ್ಯಾರ್ಥಿ, ಕಡೆಕಾರು ಕೆನರಾ ಬ್ಯಾಂಕ್ ಪ್ರಬಂಧಕರಾದ ಶ್ವೇತಾ ಎಸ್. ಶುಭಾಶಂಸನೆ ಗೈಯಲಿದ್ದಾರೆ. ಬಳಿಕ ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರಗಲಿದೆ.