ಕೋಟ, ಮೇ 24: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರ ಸಹಯೋಗದೊಂದಿಗೆ ಕೃಷಿ ಇಲಾಖೆ ಕುಂದಾಪುರ, ಉಡುಪಿ ಮತ್ತು ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ, ಕೋಟ ಇವರ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲನಯನ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಹದಿನೈದು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಕೋಟದ ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿಯಲ್ಲಿ ಆರಂಭಗೊಂಡಿತು. ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭ ಸ್ವ ಉದ್ಯೋಗಾಕಾಂಕ್ಷಿಗಳಿಗೆ ಇರುವ ಉದ್ಯಮ ಅವಕಾಶಗಳ ಬಗ್ಗೆ ತಿಳಿಸಿದರು. ಉಡುಪಿ ಜಲಾನಯನ ಸಂಯೋಜಕಿ ಉಷಾ, ಸಂಪನ್ಮೂಲ ವ್ಯಕ್ತಿ ಜ್ಯೋತಿ ಪ್ರಶಾಂತ, ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ ಕೋಟ ಇದರ ಕೇಂದ್ರ ಮುಖ್ಯಸ್ಥರಾದ ಚೇತನ ಎಂ., ಸಿಡಾಕ್ ಉಡುಪಿ ಕಛೇರಿಯ ತರಬೇತುದಾರ ಪೃಥ್ವಿರಾಜ್ ಎಂ ನಾಯಕ್ ಉಪಸ್ಥಿತರಿದ್ದರು. ಸಿಡಾಕ್ ಉಡುಪಿ ಕಛೇರಿಯ ತರಬೇತುದಾರರಾದ ಶ್ರುತಿ ಸ್ವಾಗತಿಸಿ, ನಿರೂಪಿಸಿದರು.