Home ಸುದ್ಧಿಗಳು ಪ್ರಾದೇಶಿಕ ಭೂ ಪರಿವರ್ತನೆ ಪ್ರಕ್ರಿಯೆ ಸರಳೀಕರಣ

ಭೂ ಪರಿವರ್ತನೆ ಪ್ರಕ್ರಿಯೆ ಸರಳೀಕರಣ

263
0

ಉಡುಪಿ, ಮೇ 22: ಸರ್ಕಾರವು ಕೃಷಿ ಜಮೀನುಗಳನ್ನು ಭೂಪರಿವರ್ತನೆಗೊಳಿಸುವ ಸಲುವಾಗಿ Affidavith Based Conversion ಮತ್ತು Master Plan Based Conversion ತಂತ್ರಾಂಶದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 95(2) ರಡಿ ಕಲ್ಪಿಸಲಾದ ಅವಕಾಶದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಅಂದರೆ ವಾಸ್ತವ್ಯ, ವಾಣಿಜ್ಯ, ಕೈಗಾರಿಕೆ ಉದ್ದೇಶಗಳಿಗಾಗಿ ಭೂಪರಿವರ್ತನೆಗೊಳಿಸಲು ಸರಳೀಕರಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ಮೂಲತಃ ಭೂ ನ್ಯಾಯ ಮಂಡಳಿಯಿಂದ ಆದೇಶವಾದ ಜಮೀನುಗಳು ಹಾಗೂ ಪಿ.ಟಿ.ಸಿ.ಎಲ್ ಕಾಯ್ದೆಗೆ ಒಳಪಡುವ ಕೃಷಿ ಜಮೀನುಗಳನ್ನು ಅರ್ಜಿದಾರರು ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿನ ಗ್ರಾಮಗಳಿಗೆ Affidavith Based ಭೂಪರಿವರ್ತನೆ ಮತ್ತು ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಒಳಗಿನ ಗ್ರಾಮಗಳಿಗೆ Master Plan Based ಭೂಪರಿವರ್ತನೆಗಾಗಿ https://landrecords.karnataka.gov.in/citizenportal/ ನಲ್ಲಿ ಲಾಗಿನ್ ಆಗುವ ಮೂಲಕ Affidavith Based conversion module ನಲ್ಲಿ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಲ್ಲಿ ಭೂಪರಿವರ್ತನೆ ಆದೇಶವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ.

ಅರ್ಜಿದಾರರು ಭೂ ಪರಿವರ್ತನೆಗಾಗಿ ಚಾಲ್ತಿ ವರ್ಷದ ಪಹಣಿ ಪತ್ರಿಕೆ, ಹಕ್ಕು ಬದಲಾವಣೆ ದಾಖಲಾತಿ (ಮ್ಯುಟೇಶನ್ ಪ್ರತಿ), ಭೂ ಪರಿವರ್ತನಾ ಪೂರ್ವ ನಕ್ಷೆ ಹಾಗೂ ನೋಟರಿಯವರಿಂದ ಪ್ರಮಾಣೀಕರಿಸಿದ ಮೂಲ ಅಫಿದಾವಿಟ್ ಪ್ರತಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಮೊದಲಿಗೆ ಈ ವೆಬ್‌ಸೈಟ್ ಮೂಲಕ ಹೊಸದಾಗಿ ಲಾಗಿನ್ ಐಡಿಯನ್ನು ಸೃಜಿಸಿ, ಮಾಹಿತಿಯನ್ನು ದಾಖಲಿಸಿ ನಂತರದಲ್ಲಿ ಅಫಿಡಾವಿತ್ ಡೌನೋಡ್ ಮಾಡಿಕೊಂಡು ನೋಟರಿ ಮೂಲಕ ದೃಢೀಕರಿಸಿ, ಸದ್ರಿ ನೋಟರಿ ಮಾಡಿರುವ ಅಫಿಡಾವಿತ್ ಅನ್ನು ಸೂಕ್ತ ದಾಖಲೆಗಳೊಂದಿಗೆ ಅರ್ಜಿದಾರರು ಸೃಜಿಸಿರುವ ಲಾಗಿನ್ ಮೂಲಕ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಿದ ನಂತರ ಭೂಪರಿವರ್ತನೆಯ ಅರ್ಜಿ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಭೂ ಪರಿವರ್ತನೆ ಆದೇಶ ಪ್ರತಿ ಪಡೆಯಲು ಅಫಿಡಾವಿತ್ ಐಡಿ ಹಾಗೂ ರಿಕ್ವೆಸ್ಟ್ ಐಡಿಯನ್ನು ನಮೂದಿಸಿಟ್ಟುಕೊಳ್ಳಬೇಕು.

https://landrecords.karnataka.gov.in/service80/ಅಫಿದಾವಿತ್ ಐಡಿ ನಮೂದಿಸಿ ಭೂಪರಿವರ್ತನೆ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳು ಅಥವಾ ಸೈಬರ್ ಸೆಂಟರ್‌ಗಳಿಗೆ ಹೋಗದೆ ನೇರವಾಗಿ ಮೇಲೆ ತಿಳಿಸಿರುವ ವಿಧಾನದಲ್ಲಿ ಭೂಪರಿವರ್ತನೆಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ 30 ದಿನದೊಳಗೆ ಭೂಪರಿವರ್ತನೆ ಅಂತಿಮ ಆದೇಶದ ಪ್ರತಿಯನ್ನು ಆನ್‌ಲೈನ್‌ನಲ್ಲಿ https://landconversion.karnataka.gov.in/service99/ ಲಿಂಕ್ ಉಪಯೋಗಿಸಿ, ರಿಕ್ವೆಸ್ಟ್ ಐಡಿ/ ಸರ್ವೇ ನಂಬರ್ ನಮೂದಿಸಿ ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಯಾವುದೇ ಕಛೇರಿಗಳಿಗೆ ಅಲೆದಾಡದೇ ಈ ಆನ್‌ಲೈನ್ Affidavith Based Conversion, MasterPlan Based ತಂತ್ರಾಂಶದ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.