ಉಡುಪಿ, ಮೇ 22: ಜಿಲ್ಲೆಯ ಹಲವೆಡೆ ಮಂಗಳವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ. ಕಾರ್ಕಳದ ನಿಟ್ಟೆಯ ಕಲ್ಲಂಪಾಡಿಪದವು ಗ್ರಾಮದ ಮನೆಯೊಂದಕ್ಕೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ ಮಳೆಯಾದ ಪ್ರಮಾಣ: ಕಾರ್ಕಳ- 20.5 ಮಿಮೀ, ಕುಂದಾಪುರ- 13.7, ಉಡುಪಿ-10.5, ಬೈಂದೂರು-28.4, ಬ್ರಹ್ಮಾವರ-6.7, ಕಾಪು-13.6, ಹೆಬ್ರಿ-20.7 ಮಿಮೀ ಮಳೆಯಾಗಿದೆ.
