Sunday, January 19, 2025
Sunday, January 19, 2025

ಶುದ್ಧ ಚಿನ್ನದಂಥಹ ವ್ಯಕ್ತಿತ್ವ ಶ್ರೀ ವಿದ್ಯಾಮಾನ್ಯತೀರ್ಥರದ್ದು: ಪುತ್ತಿಗೆ ಶ್ರೀ

ಶುದ್ಧ ಚಿನ್ನದಂಥಹ ವ್ಯಕ್ತಿತ್ವ ಶ್ರೀ ವಿದ್ಯಾಮಾನ್ಯತೀರ್ಥರದ್ದು: ಪುತ್ತಿಗೆ ಶ್ರೀ

Date:

ಉಡುಪಿ, ಮೇ 20: ನಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರು ನಿಷ್ಕಳಂಕ ಶುದ್ಧ ವ್ಯಕ್ತಿತ್ವದವರು. ಮನಸ್ಸು-ಮಾತು-ಕ್ರಿಯೆಗಳಲ್ಲಿ ಒಂದೇ ರೀತಿಯಲ್ಲಿ ಇದ್ದವರು.
ಎಂದಿಗೂ ಇನ್ನೊಬ್ಬರನ್ನು ದ್ವೇಷಿಸುವ ಪ್ರವೃತ್ತಿ ಅವರಲ್ಲಿ ಇರಲಿಲ್ಲ. ಶುದ್ಧವಾದ ಯತಿಧರ್ಮ ಪಾಲನೆ, ಪಾಠ-ಪ್ರವಚನಗಳಲ್ಲಿ ಅಚಲವಾದ ದೀಕ್ಷೆ, ಶಿಷ್ಯ ವಾತ್ಸಲ್ಯ, ಸಮಾಜದ ಅಭಿವೃದ್ಧಿಯ ಹಂಬಲ ಮುಂತಾದ ಆದರ್ಶ ಗುಣಗಳುಳ್ಳ ಗುರುಗಳು. ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೇ ಮೊದಲಾದ ಅನೇಕ ಯತಿಗಳನ್ನು ವಿದ್ವಾಂಸರನ್ನಾಗಿ ರೂಪಿಸಿದವರು.
ಇಂಥಹ ಪರಿಶುದ್ಧವಾದ ವ್ಯಕ್ತಿತ್ವದ ಗುರುಗಳಿಂದ ಪೂಜಿಸಿಕೊಳ್ಳಲು ಸಂಕಲ್ಪಿಸಿ ಶ್ರೀಕೃಷ್ಣನು ಗುರುಗಳಿಗೆ ಶ್ರೀಭಂಡಾರಕೇರಿ ಮಠದ ಜೊತೆಗೆ ಶ್ರೀ ಪಲಿಮಾರು ಮಠದ ಆಧಿಪತ್ಯವನ್ನು ಕರುಣಿಸಿದ. ಭಗವಂತನ ಪರಮಾನುಗ್ರಹದಿಂದ ದೊರೆತ ಶ್ರೀಕೃಷ್ಣ ಪೂಜಾ ಪರ್ಯಾಯದಲ್ಲಿ ಚಿನ್ನದ ರಥ, ವಜ್ರಕಿರೀಟಗಳನ್ನು ಸಮರ್ಪಿಸಿ ಗುರುಗಳು ಧನ್ಯರಾದರು. ಇಂಥಹ ಮಹಾಗುರುಗಳನ್ನು ಪಡೆದ ನಾವೇ ಧನ್ಯರು ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಅವರು ಸೋಮವಾರ ಶ್ರೀ ಕೃಷ್ಣ.ಮಠದ ರಾಜಾಂಗಣದಲ್ಲಿ ನಡೆದ ಶ್ರೀಭಂಡಾರಕೇರಿ ಮತ್ತು ಶ್ರೀ ಪಲಿಮಾರು ಉಭಯ ಮಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರ ಆರಾಧನೆಗಾಗಿ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಗುರುಗಳ ವ್ಯಕ್ತಿಯನ್ನು ಸ್ಮರಿಸಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರು ಶ್ರೀಮದ್ಭಾಗವತದ ದಶಮಸ್ಕಂಧದ ಚಿಂತನೆಯನ್ನು ಮಾಡಿ ಶ್ರೀವಿದ್ಯಾಮಾನ್ಯರಿಗೆ ಸಮರ್ಪಿಸಿದರು.

ಸಭೆಯಲ್ಲಿ ಡಾ. ಶಂಕರನಾರಾಯಣ ಅಡಿಗ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ, ವಿದ್ವಾನ್ ನಂದಿಕೂರು ಜನಾರ್ದನ ಭಟ್, ವಿದ್ವಾನ್ ಹೃಷೀಕೇಶ ಮಠದ, ಉಡುಪಿ ಇವರು ಶ್ರೀವಿದ್ಯಾಮಾನ್ಯತೀರ್ಥರ ಮಹಿಮೆಗಳನ್ನು ವರ್ಣಿಸಿದರು. ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಅನೇಕ ವಿದ್ವಾಂಸರು ಉಪಸ್ಥಿತರಿದ್ದರು. ಡಾ.ಬಿ.ಗೋಪಾಲಾಚಾರ್ ಹಾಗೂ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!