ಕಾಪು, ಮೇ 20: ಯೋಜನಾ ನಿರ್ದೇಶಕರಾದ ಕರೀಂ ಅಸಾದಿ ಅವರ ಅಧ್ಯಕ್ಷತೆಯಲ್ಲಿ ಕಾಪು ತಾಲೂಕಿನ ಎನ್.ಆರ್. ಎಲ್.ಎಮ್ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಪಶು ಸಖಿ, ಕೃಷಿ ಸಖಿ,ಬಿ. ಸಿ ಸಖಿ ಹಾಗೂ ಆರ್ಥಿಕ ಸಾಕ್ಷರತಾ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಗತಿ ಪರಿಶೀಲನೆ ಸಭೆಯು ಜರಗಿತು.
ಎನ್.ಆರ್. ಎಲ್.ಎಮ್ ಯೋಜನೆಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಲೋಕೋಸ್ ತಂತ್ರಾಂಶದಲ್ಲಿ ಎಸ್.ಎಚ್.ಜಿ ಪ್ರೊಫೈಲ್ ಎಂಟ್ರಿ, ಹೊಸ ಸ್ವ- ಸಹಾಯ ಸಂಘ ರಚನೆ, ಒಕ್ಕೂಟಗಳ ದಾಖಲಾತಿ ನಿರ್ವಹಣೆ, ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ ಶೇರ್ ಕಲೆಕ್ಷನ್, ಘನ ತ್ಯಾಜ್ಯ ನಿರ್ವಹಣೆ ಕುರಿತು ಒಕ್ಕೂಟಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಕಾಪು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಎಲ್ ಮೋಹನ್ ಕುಮಾರ್ ಸಂಜೀವಿನಿ ಯೋಜನೆಯನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ತಿಳಿಸಿ, ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು. ಸಹಾಯಕ ನಿರ್ದೇಶಕರಾದ ಜೇಮ್ಸ್ ಡಿ’ಸಿಲ್ವ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಹಂತ ಹಂತವಾಗಿ ಸಾಧನೆ ಮಾಡುವಂತೆ ತಿಳಿಸಿದರು. ಸಮಸ್ಯೆ ಇರುವ ಜಿ.ಪಿ.ಎಲ್.ಎಫ್ ಗಳಿಗೆ ಭೇಟಿ ನೀಡುವಂತೆ ಎನ್.ಆರ್. ಎಲ್.ಎಮ್ ಸಿಬ್ಬಂದಿಯವರಿಗೆ ತಿಳಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯಾ ಎಂ.ಬಿ.ಕೆ., ಎಲ್.ಸಿ.ಆರ್.ಪಿ ಕಾರ್ಯವ್ಯೆಖರಿಯ ಬಗ್ಗೆ ತಿಳಿಸಿದರು. ಯುವ ವೃತ್ತಿಪರ ಸಮಂತ್ ಲೋಕೋಸ್ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ತಾಲೂಕು ವ್ಯವಸ್ಥಾಪಕಿ ಸವಿತಾ, ಅಶ್ವಿನಿ, ಸುಮಿತ್ರಾ, ಲಕ್ಷ್ಮೀ ಉಪಸ್ಥಿತರಿದ್ದರು.