ಉಡುಪಿ: ಸದಾ ಟ್ರಾಫಿಕ್ ಜಾಮ್ ಸಮಸ್ಯೆ ಇರುವ ಸಂತೆಕಟ್ಟೆ ಜಂಕ್ಷನ್ ಇಲ್ಲಿನ ಪರಿಹಾರಕ್ಕಾಗಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಅನುದಾನ ತರಿಸುವಲ್ಲಿ ಶ್ರಮಿಸಿದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್ ರವರನ್ನು ಇಂದು ನಡೆದ ಸಮಾಲೋಚನಾ ಸಭೆಯಲ್ಲಿ ಅಭಿನಂದಿಸಲಾಯಿತು.
ಸಭೆಯಲ್ಲಿ ಸ್ಥಳೀಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈಗ ಆಗುವ ಟ್ರಾಫಿಕ್ ಬ್ಲಾಕ್ ಸಮಸ್ಯೆಗೆ ತುರ್ತಾಗಿ ಒಂದೇ ಕಡೆ ಇರುವ ಬಸ್ಸು ನಿಲ್ದಾಣವನ್ನು ಹಂಚಿ ಹಾಕುವುದಲ್ಲಿ ತುಂಬಾ ಅನುಕೂಲ. ಕೆಮ್ಮಣ್ಣು ಹೂಡೆ ಹೋಗುವ ಬಸ್ಸು ಸಂತೆಕಟ್ಟೆಯ ಕೆಮ್ಮಣ್ಣು ತಿರುವಿನಲ್ಲ ಮಾಡುವುದು. ಕೊಳಲಗಿರಿ ಬ್ರಹ್ಮಾವರ ಕುಂದಾಪುರ ಕಡೆ ಹೊಗುವ ಬಸ್ಸುಗಳನ್ನು ಈಗ ಇರುವ ಶೌಚಲಯದ ಇನ್ನು ಸ್ವಲ್ಪ ಮುಂದಕ್ಕೆ ಮಾಡುವುದು. ಉಡುಪಿ ಕಡೆ ಸಾಗುವ ಬಸ್ಸುಗಳನ್ನು ಹಳೆ ಜೊನಾತನ್ ಬೇಕರಿ ಇರುವ ಸರ್ವಿಸ್ ರೋಡಲ್ಲಿ ಸಂಚರಿಸುವಂತೆ ಮಾಡಬೇಕು.
ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ ಕಾಮಾಗಾರಿ ಆರಂಭಿಸುವ ಮೊದಲು ಅದರ ನೀಲ ನಕ್ಷೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಸಂತೆಕಟ್ಟೆ ಪರಿಸರದಲ್ಲಿ ಹಾಕಬೇಕಾಗಿ ಸ್ಥಳೀಯರು ಕೋರಿಕೆ ಮುಂದಿಟ್ಟರು. ಸೇತುವೆಯ ಬಗ್ಗೆ ತೊಂದರೇ ಅಗದಂತೆ ಹೆಚ್ಚಿನ ಅನುಕೂಲತೆ ಆಗುವಂತೆ ಜನಪ್ರತಿನಿಧಿಗಳು ವಿಶೇಷ ಕಾಳಜಿ ವಹಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಸಿ ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗುವಂತೆ ಮಾಡಿಕೊಡುವಲ್ಲಿ ಸಹಕರಿಸಬೇಕು. ಅಂಬಾಗಿಲು ನಿಂದ ಕೆಜಿ ರೋಡ್ ಸೇತುವೆ ವರೆಗೆ ಎರಡೂ ಬದಿಯ ಸರ್ವಿಸ್ ರೋಡ್ ಗಳನ್ನು ಅಗಲೀಕರಣ ಮತ್ತು ವಿಸ್ತಾರ ಮುಂದುವರೆಸಬೇಕು.
ಸದಾ ಟ್ರಾಫಿಕ್ ಬ್ಲಾಕ್ ಅಗುವುದರಿಂದ ಆಶಿರ್ವಾದದಿಂದ ಸಂತೆಕಟ್ಟೆ ಈಗಿನ ಮೀನು ಮಾರ್ಕೆಟ್ ವರೆಗೆ ಇರುವ ಮುಖ್ಯ ರಸ್ತೆ ಸರ್ವಿಸ್ ರಸ್ತೆಯಲ್ಲಿ ಮತ್ತು ಅಂಗಡಿ ಮುಂಭಾಗದಲ್ಲಿ ನಿಲ್ಲಿಸುವ ವಾಹಗಳಿಗೂ ದಂಡ ವಿಧಿಸಬೇಕು ಎಂದು ವಿನಂತಿಸಲಾಯಿತು. ಇಂದಿನ ಸಭೆಯಲ್ಲಿ ಬಂದಿರುವ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಶಾಸಕರಲ್ಲಿ ಸಮಾಲೋಚನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.