Wednesday, February 26, 2025
Wednesday, February 26, 2025

ಉಡುಪಿ: ಬಸ್ಸುಗಳು ನಿಗದಿತ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಉಡುಪಿ: ಬಸ್ಸುಗಳು ನಿಗದಿತ ಮಾರ್ಗದಲ್ಲಿ ಸಂಚರಿಸಲು ಸೂಚನೆ

Date:

ಉಡುಪಿ, ಮೇ 15: ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಬರುವ ಕೆಲವೊಂದು ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು ರಾ.ಹೆ.17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು ರಾ.ಹೆ.66 ಕರಾವಳಿ ಬೈಪಾಸಿನಿಂದ ಅಂಬಲಪಾಡಿ ಬೈಪಾಸ್- ಬ್ರಹ್ಮಗಿರಿ-ಅಜ್ಜರಕಾಡು-ತಾಲೂಕು ಕಛೇರಿ ಮೂಲಕ ಹಾಗೂ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು ತಾಂಗದಗಡಿ-ಗುಂಡಿಬೈಲು ಮೂಲಕ ಕಲ್ಸಂಕ ಬಂದು ಬೃಂದಾವನ ಹೋಟೆಲ್ ಬಳಿ ಎಡಕ್ಕೆ ತಿರುಗಿ ಕಾಫಿಯ ಹೋಟೆಲ್ ಬಳಿ ಬಲಕ್ಕೆ ತಿರುಗಿ ಸಿಟಿ ಬಸ್ಸು ನಿಲ್ದಾಣಕ್ಕೆ ತಲುಪುವಂತೆ ಹಾಗೂ ಬಾರ್ಕೂರು-ಬ್ರಹ್ಮಾವರ-ಹೊನ್ನಾಳ-ಹೆಬ್ರಿ-ಪೆರ್ಡೂರು-ಕುಕ್ಕೆಹಳ್ಳಿ ಹಾಗೂ ಇತರೆ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕ ಬಂದು ಉಡುಪಿ ಬಸ್ಸು ನಿಲ್ದಾಣಕ್ಕೆ ಪ್ರವೇಶಿಸುವಂತೆ ಜಿಲ್ಲಾ ದಂಡಾಧಿಕಾರಿಯವರು ಈಗಾಗಲೇ ಅಧಿಸೂಚನೆ ಹೊರಡಿಸಿದ್ದರೂ ಸಹ ಅಂಬಾಗಿಲು- ಕಲ್ಸಂಕ ಮಾರ್ಗದಲ್ಲಿ ಬಸ್ಸುಗಳ ಸಂಚರಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿರುತ್ತವೆ. ಮೇಲೆ ತಿಳಿಸಲಾದ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಅಂಬಾಗಿಲು-ಗುಂಡಿಬೈಲು-ಕಲ್ಸಂಕ ಮಾರ್ಗವಾಗಿ ಉಡುಪಿ ಬಸ್ಸು ನಿಲ್ದಾಣ ತಲುಪಲು ಎಲ್ಲಾ ಬಸ್ಸು ಮಾಲೀಕರು ಕ್ರಮವಹಿಸಬೇಕು. ತಪ್ಪಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!