ಕೋಟ, ಮೇ 13: ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು. ಬೆಟ್ಟಿನಮನೆ ವಠಾರದಲ್ಲಿ ಬಾರಿಕೆರೆ ಯುವಕ ಮಂಡಲ ಕೋಟ ಇದರ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾರಿಕೆರೆ ಯುವಕ ಮಂಡಲದ ಸಾಮಾಜಿಕ ಬದ್ಧತೆ ಪ್ರಶಂಸನೀಯ ಎಂದರು. ಅಧ್ಯಕ್ಷತೆಯನ್ನು ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್ ವಹಿಸಿದ್ದರು. ಎಸ್‌ಎಸ್‌ಎಲ್ ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಶೋಧನಾ, ನಿಶಾಂತ್ ಹಂದೆ, ಶುಭನ್, ಸಂಜನಾ, ಭಕ್ತಿ, ವೈಷ್ಣವಿ ಕಾಂಚನ್, ಉಜ್ವಲ್, ಅನನ್ಯ, ಮಾನ್ಯ ವಿ ಪೂಜಾರಿ, ದೀಪ್ತಿ, ದಿಶಾ, ಅನಘ ಐತಾಳ್, ವಿನ್ಯಾಸ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮುಖ್ಯ ಅಭ್ಯಾಗತರಾಗಿ ನಂದಿಕೇಶ್ವರ ದೈವಸ್ಥಾನದ ಮೊಕ್ತೇಸರ ಅನಂತ ಮರಕಾಲ, ಬಾರಿಕೆರೆ ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ ಕಾಂಚನ್, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಬಾರಿಕೆರೆ ಯುವಕ ಮಂಡಲದ ಗೌರವ ಸಲಹೆಗಾರ ಸಿರಾಜ್ ಸಾಹೇಬ್, ಮಾಜಿ.ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಉಪನ್ಯಾಸಕರಾದ ಕಿಶೋರ್ ಹಂದೆ, ರವಿ ಕಾರಂತ್ ಇದ್ದರು. ಕೋಟ ಸಿಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾರಿಕೆರೆ ಯುವಕ ಮಂಡಲದ ಸದಸ್ಯ ಪ್ರತಾಪ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.