Sunday, September 8, 2024
Sunday, September 8, 2024

ಜಯಂತ್ ಕಾಯ್ಕಿಣಿ ಕಥೆಗಳು ಬದಲಾವಣೆ ತರುವ ಶಕ್ತಿ ಹೊಂದಿವೆ: ಪ್ರೊ ರಾಜೇಂದ್ರ ಚೆನ್ನೈ

ಜಯಂತ್ ಕಾಯ್ಕಿಣಿ ಕಥೆಗಳು ಬದಲಾವಣೆ ತರುವ ಶಕ್ತಿ ಹೊಂದಿವೆ: ಪ್ರೊ ರಾಜೇಂದ್ರ ಚೆನ್ನೈ

Date:

ಮಣಿಪಾಲ, ಮೇ 13: ಪ್ರತಿ ಸಾಮಾನ್ಯ ಮುಖದ ಹಿಂದೆ ನೂರಾರು ಅಸಾಮಾನ್ಯ ಕಥೆಗಳಿವೆ ಎಂದು ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಸಾಬೀತುಪಡಿಸಿದೆ ಎಂದು ಖ್ಯಾತ ಲೇಖಕ, ವಿಮರ್ಶಕ ಪ್ರೊ ರಾಜೇಂದ್ರ ಚೆನ್ನೈ ಅಭಿಪ್ರಾಯಪಟ್ಟರು. ಜಯಂತರ ಕಥೆಗಳು ಸೂಕ್ಷ್ಮವಾದ ರೀತಿಯಲ್ಲಿ ನಮ್ಮನ್ನು ಪ್ರಭಾವಿಸಿ, ಬದಲಾಯಿಸುವ ಶಕ್ತಿ ಹೊಂದಿವೆ. ದಟ್ಟ ಭೌತಿಕ ವಿವರಗಳಲ್ಲಿ ಹರಳುಗಟ್ಟುವ ಅವರ ಕಥೆಗಳ ಕಾರಣದಿಂದ ಇವರನ್ನು ಬದಲಾವಣೆಯ ‘ಸಾಂಸ್ಕೃತಿಕ ಇತಿಹಾಸಗಾರ’ ಎನ್ನಬಹುದು ಎಂದು ಪ್ರೊ ಚೆನ್ನಿ ಹೇಳಿದರು. ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ನಡೆದ ‘ಜಯಂತ್ ಕಾಯ್ಕಿಣಿ ಮತ್ತು ಅವರ ಸಾಹಿತ್ಯದ ಜೊತೆ ಒಂದು ದಿನ’ದಲ್ಲಿ ಭಾಗವಹಿಸುತ್ತ, ಪ್ರೊ ರಾಜೇಂದ್ರ ಚೆನ್ನಿ ಮುಂಬೈ ಮಹಾನಗರಿಯ ನಗರ ಜೀವನದಲ್ಲಿ ಕಳೆದುಹೋಗಬಹುದಾದ ನಿರ್ಬಲ ಎನ್ನಬಹುದಾದ ಪಾತ್ರಗಳನ್ನು ಮುನ್ನೆಲೆಗೆ ತಂದು ಅವರ ಬದುಕುವ ಶಕ್ತಿಯ ಅಸಾಮಾನ್ಯತೆಯನ್ನು ಜಯಂತ್ ಅವರು ತಮ್ಮ ಕಥೆಗಳಲ್ಲಿ ಕಾಣಿಸಿದ್ದಾರೆ, ಎಂದರು.

ಜಯಂತ್ ಇವರನ್ನು ಚೆಕೋವ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ದೇವನೂರು ಮಹಾದೇವ – ಈ ಕಥಾ ಪರಂಪರೆಯ ಹಿನ್ನಲೆಯಲ್ಲಿ ನಿಲ್ಲಿಸಿ ನೋಡಿದ ಪ್ರೊ ಚೆನ್ನಿಯವರು ಜಯಂತ್ ಕಾಯ್ಕಿಣಿಯವರ ಕಥೆಗಳಲ್ಲಿ ಸಾಂಪ್ರದಾಯಿಕ ನೈತಿಕತೆ ಪ್ರಶ್ನಿಸಲ್ಪಡುತ್ತದೆ. ಅವರು ನಿಜವಾಗಿ ಮುಂಬೈ ಮಾಯಾನಗರಿಯನ್ನು ಕಟ್ಟಿ, ಅಂಚಿಗೆ ತಳ್ಳಲ್ಪಟ್ಟವರ ಕುರಿತು ಮಾತನಾಡುತ್ತಾರೆ. ಅಲ್ಲಿ ಜಾಗತೀಕರಣದ ಒಂದು ಸೂಕ್ಷ್ಮವಾದ ವಿಮರ್ಷೆಯಿದೆ, ಎಂದರು. ಜಯಂತರ ಗದ್ಯವನ್ನು ‘ಅತ್ಯುತ್ತಮ’ ಎಂದು ಬಣ್ಣಿಸಿದ ಪ್ರೊ ಚೆನ್ನಿಯವರು ಜನಪ್ರಿಯ ಮಾಧ್ಯಮ ಮತ್ತು ಸಿನೆಮಾ ಸಾಹಿತ್ಯದಲ್ಲಿ ಭಾಗವಹಿಸುವುದರ ಮೂಲಕ ‘ಶ್ರೇಷ್ಠ’ ಮತ್ತು ‘ಜನಪ್ರಿಯ’ದ ಮಧ್ಯದ ಗೋಡೆಯನ್ನು ಜಯಂತ್ ಒಡೆಯುವುದರ ಮೂಲಕ ಹಲವರನ್ನು ದಿಗಿಲುಗೊಳಿಸಿದ್ದಾರೆ ಎಂದರು.

ಲೇಖಕಿ ಅಭಿಲಾಷ ಹಂದೆ ಮಾತನಾಡಿ, ಜಯಂತ್ ಸಾಹಿತ್ಯದ ಮಾನವೀಯ ಎಳೆಗಳನ್ನು ಗುರುತಿಸಿದರು. ತಮ್ಮ ಪಾತ್ರಗಳ ಜೊತೆಗೊಂದು ‘ನಿಸ್ಸಂಗದ ಸಾಂಗತ್ಯ’ ವನ್ನು ಸಾಧಿಸಿ ನಿಜ ಜೀವನವನ್ನು ಸೆರೆ ಹಿಡಿಯುತ್ತಾರೆ ಎಂದರು. ವಿಮರ್ಶಕ ಡಾ ಸಿರಾಜ್ ಅಹಮದ್ ಮಾತನಾಡಿ ಜಯಂತ್ ಕಾವ್ಯ ಸಂಕೀರ್ಣವಾದುದ್ದು, ಸೂಕ್ಷ್ಮವಾದದ್ದು. ಅವರ ಕಥಾಪಾತ್ರಗಳು ಬಂಡವಾಳಶಾಹಿ ಆಧುನಿಕತೆಯನ್ನು ಧೈರ್ಯದಿಂದ ಎದುರಿಸುವಂತವರಾಗಿವೆ ಎಂದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ ವರದೇಶ್ ಹಿರೇಗಂಗೆ ಮಾತನಾಡಿ- ತಮ್ಮ ಪ್ರತಿಪುಸ್ತಕದ ‘ಅರಿಕೆ’ಯಲ್ಲಿ ಜಯಂತ್ ಸಾಹಿತ್ಯದ ತಾತ್ವಿಕತೆಯ ಕುರಿತು, ಒಳನೋಟಗಳನ್ನು ನೀಡುತ್ತ, ದೈನಂದಿನ ವಿವರಗಳಿಂದ ‘ಅಸಾಮಾನ್ಯ’ವನ್ನು ಹೊಳೆಸುತ್ತ ದೈನಿಕದ ದಾರ್ಶನಿಕರಾಗಿದ್ದಾರೆ ಎಂದರು. ಜಿಸಿಪಿಎಎಸ್ ವಿದ್ಯಾರ್ಥಿಗಳಾದ ಗೌತಮಿ ಕಾಕತ್ಕರ್, ಡೆಸ್ಮ್ಯನ್ಡ್ ದಾಸ್, ಸಂಪದ ಭಾಗವತ್, ಅಭಿಜಿತ್ ಅನಿಲ್ ಕುಮಾರ್, ಸಘರ್ ಅಡಾ-ಇವರು ಜಯಂತ್ ಕತೆಗಳ ಕುರಿತು ಪ್ರಬಂಧ ಮಂಡಿಸಿದರು. ಜಯಂತ್ ಕುರಿತ ಸಾಕ್ಷ್ಯಚಿತ್ರದ ಭಾಗಶಃ ಪ್ರದರ್ಶನವಾಗಿ, ಅದನ್ನು ಮಾಡಿದ ಮಾಧ್ಯಮಪಟು ಅವಿನಾಶ್ ಕಾಮತ್ ಜೊತೆ ಚರ್ಚೆ ನಡೆಯಿತು. ಗಾಯಕಿ ಶ್ರಾವ್ಯ ಬಾಸ್ರಿ ಜಯಂತರ ಚಲನಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ನಂತರದ ಮಾತುಕತೆಯಲ್ಲಿ ಜಯಂತ್ ಕಾಯ್ಕಿಣಿ, ಸಾಹಿತ್ಯದ ತಮ್ಮೆಲ್ಲ ಒಳನೋಟಗಳನ್ನು ತೆರೆದಿಟ್ಟರು. ‘ಪಾಸ್ಬುಕ್, ಫೇಸ್ಬುಕ್ ಗಳಾಚೆ ಹಿರಿಯ ಲೇಖಕರ ‘ಬುಕ್'(ಪುಸ್ತಕ)ಗಳನ್ನ ಓದಲು ಕಿರಿಯ ಲೇಖಕರಿಗೆ, ಯುವಜನಾಂಗಕ್ಕೆ ಕರೆನೀಡಿದ ಅವರು, ನೀವು ಜನರ ಜೊತೆ ಬೆರೆತು ಹೋದಲ್ಲಿ ಕಥೆಗಳು ಹುಟ್ಟಿಕೊಳ್ಳುತ್ತವೆ, ಎಂದರು. ‘ಕಾಯಕವೇ ಕೈಲಾಸ’ವಾದ ಮುಂಬೈ ಒಂದು ಬಿಡುಗಡೆಯ ಸ್ಥಳ. ಎಲ್ಲರನ್ನು ಮಾನವೀಯಗೊಳಿಸುವ, ಆಸ್ಪತ್ರೆ ಒಂದು ಅತ್ಯಂತ ಆಧ್ಯಾತ್ಮಿಕ ಸ್ಥಳ ಮತ್ತು ತಮ್ಮ ಅನೇಕ ರೂಪಕಗಳು ಅಲ್ಲಿಂದಲೇ ಹುಟ್ಟಿವೆ ಎಂದರು. ವಿಶಾಲ ಅರ್ಥದಲ್ಲಿ ಮುಗಿಯದ, ವಿಸ್ಮಯಗೊಳಿಸುವ ಜೀವನ, ಮುಕ್ತಾಯಗೊಳ್ಳದ ತಮ್ಮ ಕಥೆಗಳ ಮೂಲ ಕಾರಣ ಎಂದು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಸೆ.7: ಶಿಕ್ಷಕರು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಇಂದಿನ...

ಸುಳ್ಳು ದಾಖಲೆ ಸೃಷ್ಟಿ: ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಸೇವೆಯಿಂದ ಬಿಡುಗಡೆ

ನವದೆಹಲಿ, ಸೆ.7: 2023 ರ ಬ್ಯಾಚ್ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್...

18ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ

ಬೆಳ್ಮಣ್, ಸೆ.7: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಮದ್ಯ ಮಾರಾಟ ನಿಷೇಧ

ಉಡುಪಿ, ಸೆ.6: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ...
error: Content is protected !!