ಉಡುಪಿ, ಮೇ 7: ಪರ್ಯಾಯ ಪುತ್ತಿಗೆ ಶ್ರೀಗಳ ಆದೇಶಾನುಸಾರ ಸುಮಾರು 15 ದಿನಗಳಿಂದ ನಡೆಯುತ್ತಿದ್ದ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಯಾವುದೇ ವಿದ್ಯೆ ಕಲಿತರೂ, ಯಾವುದೇ ಉದ್ಯೋಗ ಮಾಡುತ್ತಿದ್ದರೂ ಆಧ್ಯಾತ್ಮಿಕ ವಿದ್ಯೆಯಿಂದ ಸದಾಚಾರ ಮೂಲಕ ಸಜ್ಜನಿಕೆಯುಳ್ಳ ನಾಗರೀಕರಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಭಾರತೀಯ ಪ್ರಜೆಗಳಾಗಿ ಎಂದು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಪುತ್ತಿಗೆ ಕಿರಿಯ ಶ್ರೀಗಳು, ಶಿಬಿರದಲ್ಲಿ ಕಲಿತ ವಿದ್ಯೆ ಯಾವತ್ತೂ ಅಚ್ಚಳಿಯದೆ ಉಳಿಯುವುದು ತನ್ಮೂಲಕ ಪ್ರತಿ ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸಿ ಆತ್ಮೋದ್ದಾರ ಚಿಂತನೆಗಳು ನಿಮ್ಮಲ್ಲಿ ಬೆಳೆಯಲಿ ಎಂದು ಹರಸಿದರು.
ಪುತ್ತಿಗೆ ವಿದ್ಯಾಪೀಠ ಹಾಗು ಪುತ್ತಿಗೆ ಮಠದಲ್ಲಿ ನಡೆದ ಶಿಬಿರದಲ್ಲಿ ಸುಮಾರು 150 ಕ್ಕೂ ಮಕ್ಕಳು ಭಾಗವಹಿಸಿ ತಾವು ಕಲಿತ ವಿದ್ಯೆಗಳನ್ನು ಗುರುಗಳಿಗೆ ಒಪ್ಪಿಸಿದ್ದರು. ಉಭಯ ಶ್ರೀಗಳು ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿದರು. ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಪ್ರಮೋದ್ ಸಾಗರ್, ಮಹಿತೋಷ್ ಆಚಾರ್ಯ, ಯೋಗೀಂದ್ರ ಭಟ್ ಉಪಸ್ಥಿತರಿದ್ದರು. ರಮೇಶ್ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು.
ಆಧ್ಯಾತ್ಮಿಕ ಚಿಂತನೆ ಮತ್ತು ಆಚರಣೆಯಿಂದ ಸಜ್ಜನಿಕೆ ಬೆಳೆಸಿಕೊಳ್ಳಿ: ಪುತ್ತಿಗೆ ಶ್ರೀ
ಆಧ್ಯಾತ್ಮಿಕ ಚಿಂತನೆ ಮತ್ತು ಆಚರಣೆಯಿಂದ ಸಜ್ಜನಿಕೆ ಬೆಳೆಸಿಕೊಳ್ಳಿ: ಪುತ್ತಿಗೆ ಶ್ರೀ
Date: