ಕೋಟ, ಏ.24: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಟ ಲೀಜನ್ ನ ಅಧ್ಯಕ್ಷರಾಗಿ ಕೋಟ ಕೇಶವ ಆಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಜೇಸಿಐ ಕೋಟ ಬ್ರಿಗೇಡಿಯರ್‌ನ ಸ್ಥಾಪಕರಾಗಿ, ಜೇಸಿಐ ವಲಯ 15ರ ಖಜಾಂಚಿ ಹಾಗೂ ಪಂಚವರ್ಣ ಯುವಕ ಮಂಡಲ ಕೋಟ ಇದರ ಸದಸ್ಯರಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಮಾಜಿ ಖಜಾಂಚಿ ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಎಸ್.ಸಿ.ಐ ಕೋಟ ಲೀಜನ್ ಅಧ್ಯಕ್ಷರಾಗಿ ಕೇಶವ ಆಚಾರ್ ಆಯ್ಕೆ

ಎಸ್.ಸಿ.ಐ ಕೋಟ ಲೀಜನ್ ಅಧ್ಯಕ್ಷರಾಗಿ ಕೇಶವ ಆಚಾರ್ ಆಯ್ಕೆ
Date: