Sunday, January 19, 2025
Sunday, January 19, 2025

ಮಸ್ಟರಿಂಗ್ ಕೇಂದ್ರಗಳಿಗೆ ತೆರಳಲು ಉಚಿತ ಬಸ್ ಸೌಲಭ್ಯ

ಮಸ್ಟರಿಂಗ್ ಕೇಂದ್ರಗಳಿಗೆ ತೆರಳಲು ಉಚಿತ ಬಸ್ ಸೌಲಭ್ಯ

Date:

ಉಡುಪಿ, ಏ.23: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕಾಗಿ ಈಗಾಗಲೇ ನೇಮಕ ಮಾಡಿರುವ ಪಿ.ಆರ್.ಓ, ಎ.ಪಿ.ಆರ್.ಓ ಹಾಗೂ ಪಿ.ಓ ಗಳು ಎಪ್ರಿಲ್ 25 ರಂದು ಮಸ್ಟರಿಂಗ್ ಕೇಂದ್ರವಾದ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಂದಾಪುರದ ಭಂಡಾರ್‌ಕರ್ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಸ್ಕೂಲ್, ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಳಿಯಾರಗೋಳಿ ದಂಡತೀರ್ಥ ಪಿಯು ಕಾಲೇಜು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಕಳದ ಕಾಬೆಟ್ಟು ಎಂ.ಪಿ.ಎಂ. ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದೆ. ಮತಗಟ್ಟೆಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂಧಿಗಳಿಗೆ ತಾವು ಕೆಲಸ ನಿರ್ವಹಿಸಬೇಕಾದ ಮಸ್ಟರಿಂಗ್ ಕೇಂದ್ರಕ್ಕೆ ಹೋಗಲು ಉಚಿತ ಬಸ್ಸುಗಳ ವ್ಯವಸ್ಥೆಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿರುತ್ತದೆ. 118-ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಂದೂರು ತಾಲೂಕು ಆಡಳಿತ ಸೌಧದಿಂದ ಬಸ್‌ಗಳು ಹೊರಡಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಕಾಂತರಾಜು, ಗ್ರಾಮ ಆಡಳಿತ ಅಧಿಕಾರಿ, ಬೈಂದೂರು: ಮೊ: 9482036207, ಸಹಾಯಕರಾದ ಕಿರಣ್ ಎಂ.ಜಿ. ಮೊ: 8431059053, ಪುನೀತ್ ಎಸ್. ಮೊ: 9036681599, ಗಣೇಶ ಮೇಸ್ತ ಮೊ: 8095782859 ಹಾಗೂ ವಿರೇಶ್ ಮೊ: 9743816440 ಅನ್ನು ಸಂಪರ್ಕಿಸಬಹುದಾಗಿದೆ. 119-ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಂದಾಪುರದ ಗಾಂಧಿ ಮೈದಾನದಿಂದ ಬಸ್ಸ್ಗಳು ಹೊರಡಲಿದ್ದು ಮಾಹಿತಿಗಾಗಿ ಮೇಲ್ವಿಚಾರಕರಾದ ಎಂ.ಹೆಚ್. ವಾಲೇಕರ್, ಮೊ: 9341049161, ಸಹಾಯಕರಾದ ರಂಗರಾಜು ಮೊ: 8197809032 ಹಾಗೂ ಕಿಶೋರ ಮೊ. 7483054340 ಅನ್ನು ಸಂಪರ್ಕಿಸಬಹುದಾಗಿದೆ. 120- ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಬೋರ್ಡ್ ಹೈಸ್ಕೂಲ್ ನಿಂದ ಬಸ್‌ಗಳು ಹೊರಡಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಅಶ್ವತ್ಥ್ ಮೊಬೈಲ್ ನಂ. 9164146545, ಸಹಾಯಕರಾದ ಶಿವರಾಜ ಕಟಗಿ ಮೊ. ನಂ. :9844218717, ಜಗದೀಶ್ ಮುರನಾಳ ಮೊ.ನಂ. 9880913596 ಅನ್ನು ಸಂಪರ್ಕಿಸಬಹುದಾಗಿದೆ. 121- ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಪು ಸರ್ವೀಸ್ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಇಜ್ಜಾರ್ ಸಾಹೇಬ್ ಮೊ:9972716555, ಸಹಾಯಕರಾದ ವಿಜಯ ಮೊ. ನಂ. 9845162068 ಹಾಗೂ ಕ್ಲಾರೆನ್ಸ್ ಲೆಸ್ಟಾನ್ ಮೊ: 8095 101024 ಅನ್ನು ಸಂಪರ್ಕಿಸಬಹುದಾಗಿದೆ. 122- ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂಡಿಮಠ ಬಸ್ ನಿಲ್ದಾಣದಿಂದ ಬಸ್‌ಗಳು ಹೊರಡಲಿದ್ದು ಮಾಹಿತಿಗಾಗಿ ಮೇಲ್ವಿಚಾರಕ ರಿಯಾಜ್ ಮಹಮ್ಮದ್ ಮೊ: 8197028656, ಸಹಾಯಕರಾದ ರವಿಚಂದ್ರ ಪಾಟೀಲ್ ಮೊ.ನಂಬರ್. 8277404724 ಹಾಗೂ ಬಾಲಕೃಷ್ಣ ತಲ್ಲೂರು ಮೊ: 8073752849 ಅನ್ನು ಸಂಪರ್ಕಿಸಬಹುದಾಗಿದೆ. ಮೇಲೆ ತಿಳಿಸಲಾದ ಸ್ಥಳಗಳಿಂದ ನೇಮಕಗೊಂಡ ಅಧಿಕಾರಿಗಳು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಸ್ಥಳಗಳಿಗೆ ತೆರಳಲು ಏಪ್ರಿಲ್ 25 ರಂದು ಬೆಳಗ್ಗೆ 6.30 ಗಂಟೆಗೆ ಸದ್ರಿ ಸ್ಥಳಗಳಲ್ಲಿ ಹಾಜರಿದ್ದು, ಅಲ್ಲಿಂದ ತಮ್ಮ ಮಸ್ಟರಿಂಗ್ ಸ್ಥಳಗಳಿಗೆ ತೆರಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!