ಉಡುಪಿ, ಏ.17: ಪರ್ಕಳದಲ್ಲಿ ಪ್ರಧಾನ ಕಚೇರಿ ಹೊಂದಿ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ 6 ಶಾಖೆಗಳನ್ನು ತೆರೆದು ಸದಸ್ಯರ ಸೇವೆಯಲ್ಲಿ ನಿರತವಾಗಿರುವ ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯು ಆರ್ಥಿಕ ವರ್ಷ 2023-24 ರಲ್ಲಿ ರೂ . 1.80 ಕೋಟಿಗೂ ಮಿಗಿಲಾದ ಪಾಲು ಬಂಡವಾಳ, ರೂ. 11.70 ಕೋಟಿಗೂ ಮಿಕ್ಕಿ ಸ್ವಂತ ನಿಧಿಗಳನ್ನು ಸ್ಥಾಪಿಸಿ, ರೂ 116.86 ಕೋಟಿ ಠೇವಣಿ, ರೂ 82.43 ಕೋಟಿ ಸಾಲ ಹೊರಬಾಕಿಯೊಂದಿಗೆ, ರೂ 478 ಕೋಟಿ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿ ರೂ 2.59 ಕೋಟಿ ನಿವ್ವಳ ಲಾಭ ಗಳಿಸಿದೆ.
ಎಲ್ಲಾ ಶಾಖೆಗಳಲ್ಲಿ ಈ ಸ್ಟಾಂಪಿಂಗ್ ಸೇವೆ, 0% ಬಡ್ಡಿಯಲ್ಲಿ ಸೋಲಾರ್ ಸಾಲ ಸೌಲಭ್ಯ, ಪರ್ಕಳ ಮುಖ್ಯರಸ್ತೆಯ ಪಕ್ಕದಲ್ಲಿ ಜಾಗ ಖರೀದಿಸಿ ಸ್ವಂತ ಕಟ್ಟಡದ ನಿರ್ಮಾಣಕಾರ್ಯ ಪ್ರಗತಿಯಲ್ಲಿದ್ದು, ಸಂಘದ ಸದಸ್ಯರಿಗೆ ಸೇವಾ ಶುಲ್ಕ ರಹಿತ ಸಾಲದ ಸೌಲಭ್ಯ, ಠೇವಣಿಗಳಿಗೆ ಅತ್ಯಾಕರ್ಷಕ ಬಡ್ಡಿದರ ಹಾಗೂ ಸಾಲಗಳಿಗೆ ಕಡಿಮೆ ಬಡ್ಡಿದರ ವಿಧಿಸಿ ಸಹಕಾರಿ ರಂಗದಲ್ಲಿ ಉನ್ನತ ಮಟ್ಟದ ಸೇವೆ ನೀಡುತ್ತಾ ಬರುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷರಾರ ಅಶೋಕ್ ಕಾಮತ್ ಕೊಡಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆ. ಕೋ. ಆಪರೇಟಿವ್ ಸೊಸೈಟಿ: ರೂ 2.59 ಕೋಟಿ ನಿವ್ವಳ ಲಾಭ

ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆ. ಕೋ. ಆಪರೇಟಿವ್ ಸೊಸೈಟಿ: ರೂ 2.59 ಕೋಟಿ ನಿವ್ವಳ ಲಾಭ
Date: