ಕೋಟ, ಏ.17: ವಿವೇಕ ವಿದ್ಯಾಸಂಸ್ಥೆಯಲ್ಲಿ ಕವಿಗೋಷ್ಠಿಯ ಮೂಲಕ ವಿಶಿಷ್ಠವಾಗಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ವಿವೇಕ ಬಾಲಕಿಯರ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಚುನಾವಣಾ ಜಾಗೃತಿಗಾಗಿ ಕವಿಗೋಷ್ಠಿ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರಾದ ಮಾನಸ, ವೈಭವಿ, ಶರ್ಮಿಳಾ ಕೆ.ಎಸ್., ಶ್ರದ್ಧಾ, ಚೇತನ, ರಕ್ಷ, ರಶ್ಮಿತ, ಪೃಥ್ವಿ, ಧನ್ಯಶ್ರೀ ಜೋಗಿ ತಮ್ಮ ಕವನಗಳನ್ನು ವಾಚಿಸಿದರು. ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ನಡೆದ ಈ ವಿಭಿನ್ನ ಕವಿಗೋಷ್ಠಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ ಸಾಥ್ ನೀಡಿದರು. ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ವಿದ್ಯಾರ್ಥಿಗಳ ಕವಿತೆಗಳನ್ನು ವಿಶ್ಲೇಷಿಸಿ ಚುನಾವಣಾ ಮಹತ್ವವನ್ನು ಪೋಷಕರಿಗೆ ಮನದಟ್ಟಾಗುವಂತೆ ವಿವರಿಸಿದರು. ವಿದ್ಯಾರ್ಥಿನಿಯರಾದ ಸಜನಿ ಸ್ವಾಗತಿಸಿ, ಧನ್ಯ ವಂದಿಸಿದರು. ಶ್ವೇತಾ ಮತ್ತು ಬಿಂದು ಕಾರ್ಯಕ್ರಮವನ್ನು ಸಂಘಟಿಸಿದರು.
ಕವಿಗೋಷ್ಠಿಯ ಮೂಲಕ ಮತದಾನದ ಜಾಗೃತಿ
ಕವಿಗೋಷ್ಠಿಯ ಮೂಲಕ ಮತದಾನದ ಜಾಗೃತಿ
Date: