ಕೋಟ, ಏ.15: ಇಲ್ಲಿನ ಕೋಟ ಗ್ರಾಮ ಪಂಚಾಯತ್ ವಿವಿಧ ಭಾಗಗಳಲ್ಲಿ ೮೦ ವರ್ಷ ಮೇಲ್ಪಟ್ಟ ವಯೋವೃದ್ಧರು ಮನೆಯಲ್ಲೇ ಮತದಾನ ಮಾಡುವ ಕಾರ್ಯಕ್ರಮ ಭಾನುವಾರ ನಡೆಯಿತು. ಚುನಾವಣಾ ಆಯೋಗದ ವಿಶೇಷ ಸೂಚನೆಯಂತೆ ವಯೋವೃದ್ಧರು ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಈ ಭಾಗಗಳಿಗೆ ಕುಂದಾಪುರ ಅಸಿಸ್ಟೆಂಟ್ ಕಮೀಷನರ್ ರಶ್ಮಿ ಭೇಟಿ ನೀಡಿ ಪರಿಶೀಲಿಸಿದರು. ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಚುನಾವಣಾ ಸೆಕ್ಟರ್ ಆಫೀಸರ್ ನಾಗೇಶ್, ಕೋಟ ಗ್ರಾಮ ಲೆಕ್ಕಿಗ ರಾಘವೇಂದ್ರ ಹಕ್ಲಾಡಿ, ಫೋಲಿಂಗ್ ಆಫೀಸರ್ ಗೋಪಾಲ ಭಟ್, ಸತೀಶ್ ದೇವಾಡಿಗ, ಮೈಕ್ರೋ ಅಬ್ಸರ್ವರ್ ಅಂಕುಶ್ ಸಗಣೆ, ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.
ವಯೋವೃದ್ಧರ ಮತ ಚಲಾವಣೆ; ಕುಂದಾಪುರ ಅಸಿಸ್ಟೆಂಟ್ ಕಮೀಷನರ್ ರಶ್ಮಿ ಭೇಟಿ

ವಯೋವೃದ್ಧರ ಮತ ಚಲಾವಣೆ; ಕುಂದಾಪುರ ಅಸಿಸ್ಟೆಂಟ್ ಕಮೀಷನರ್ ರಶ್ಮಿ ಭೇಟಿ
Date: