Monday, January 20, 2025
Monday, January 20, 2025

ಏ.14: ಪುತ್ತಿಗೆ ಶ್ರೀಗಳ ಪೀಠಾರೋಹಣದ ಸುವರ್ಣ ಸಂಭ್ರಮದ ಪ್ರಯುಕ್ತ ಸುವರ್ಣ ಸಂಕಲ್ಪ

ಏ.14: ಪುತ್ತಿಗೆ ಶ್ರೀಗಳ ಪೀಠಾರೋಹಣದ ಸುವರ್ಣ ಸಂಭ್ರಮದ ಪ್ರಯುಕ್ತ ಸುವರ್ಣ ಸಂಕಲ್ಪ

Date:

ಉಡುಪಿ, ಏ.13: 1974 ಏಪ್ರಿಲ್ 8 ರಂದು ತಮ್ಮ 12ನೇ ವಯಸ್ಸಿನಲ್ಲಿ ಸಂನ್ಯಾಸವನ್ನು ಸ್ವೀಕರಿಸಿ ಪೀಠಾಧಿಪತಿಗಳಾದ, ಪ್ರಸಕ್ತ ಶ್ರೀ ಕೃಷ್ಣಮಠದ ಪರ್ಯಾಯ ಸ್ವಾಮಿಗಳಾದ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳ ಸಂನ್ಯಾಸ ಜೀವನಕ್ಕೆ ಏಪ್ರಿಲ್ 2024 ಕ್ಕೆ 50 ವಸಂತಗಳ ಸುವರ್ಣ ಸಂಭ್ರಮ. ಈ ವಿಶೇಷ ಸಂದರ್ಭವನ್ನು ಪರಮಪೂಜ್ಯ ಶ್ರೀಶ್ರೀಗಳ ಶಿಷ್ಯ ಹಾಗೂ ಅಭಿಮಾನಿವೃಂದವು ಏಪ್ರಿಲ್ 14 ರ ಸೌರಮಾನ ಯುಗಾದಿಯ ಶುಭಸಂದರ್ಭದಲ್ಲಿ ವಿಶೇಷವಾದ ಕಾರ್ಯಕ್ರಮಗಳ ಮೂಲಕವಾಗಿ ಗೌರವಾರ್ಪಣೆ ಮಾಡಲು ನಿಶ್ಚಯಿಸಿದ್ದು, ಸಾಯಂ ಗಂಟೆ 5 ಕ್ಕೆ ಮೆರವಣಿಗೆಯಲ್ಲಿ ಪರಮಪೂಜ್ಯ ಸ್ವಾಮಿಗಳನ್ನು ರಾಜಾಂಗಣಕ್ಕೆ ಕರೆತಂದು ಭಕ್ತರು-ಶಿಷ್ಯರು ಮತ್ತು ವಿವಿಧ ಸಂಘಟನೆಗಳಿಂದ ಪೂಜ್ಯ ಶ್ರೀಶ್ರೀಗಳ ಮೂಲಕ ಶ್ರೀ ಕೃಷ್ಣನಿಗೆ ಸುವರ್ಣ ನಾಣ್ಯಗಳಿಂದ ಅಭಿಷೇಕ ಮತ್ತು ಸಂಜೆ 4 ಗಂಟೆಯಿಂದ 7 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತಮ್ಮ ಸುವರ್ಣ ಸಂನ್ಯಾಸದ ಈ ವಿಶೇಷ ಸಂದರ್ಭವನ್ನು ಸ್ಮರಣೀಯವನ್ನಾಗಿಸಲು ಹಾಗೂ ತಮ್ಮ ಚತುರ್ಥ ಪರ್ಯಾಯವಾದ ‘ವಿಶ್ವಗೀತಾ ಪರ್ಯಾಯ’ ದ ವಿಶ್ವವ್ಯಾಪಿ ಯೋಜನೆ ‘ಕೋಟಿಗೀತಾ ಲೇಖನ ಯಜ್ಞ’ದ ಸ್ಮರಣಾರ್ಥವಾಗಿ ಪೂಜ್ಯ ಶ್ರೀಗಳು ಉಡುಪಿ ಶ್ರೀ ಕೃಷ್ಣನಿಗೆ ಅಪೂರ್ವವಾದ ‘ಪಾರ್ಥಸಾರಥಿ ಸುವರ್ಣ ರಥ’ ವೆಂಬ ಚಿನ್ನದ ರಥವನ್ನು ಸುಮಾರು 18 ಕೋಟಿ ವೆಚ್ಚದಲ್ಲಿ ಸಮರ್ಪಿಸಲು ಸಂಕಲ್ಪಿಸಿದ್ದು ಈ ಯೋಜನೆಯ ಪ್ರಾರಂಭ ಮುಹೂರ್ತವನ್ನು ನಡೆಸಲಾಗುವುದು. ಮಾಹೆ ಸಹಕುಲಾಧಿಪತಿಗಳು ಮತ್ತು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್ ಬಲ್ಲಾಳ್, ಎಲ್.ಐ.ಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕರಾದ ರಾಜೇಶ್ ಮುಧೋಳ್, ಯು.ಪಿ.ಸಿ.ಎಲ್. ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಕಿಶೋರ್ ಆಳ್ವ, ಕರಾವಳಿ ಗ್ರೂಪ್ ಆಫ್ ಕಾಲೇಜ್ ನ ನಿರ್ದೇಶಕರಾದ ಗಣೇಶ್ ರಾವ್, ಉಡುಪಿ ನಂದಿಕೂರಿನ ಪ್ರಾಜ್ ಇಂಡಸ್ಟ್ರೀಸ್ ನ ಅಶೋಕ್ ಶೆಟ್ಟಿ, ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೇಂಜ ಶ್ರೀಧರ ತಂತ್ರಿಗಳು, ಬ್ರಹ್ಮಾವರ ರೋಟರಿಯ ನಿಯೋಜಿತ ಗವರ್ನರ್ ಬಿ.ಎಮ್ ಭಟ್ ಮತ್ತು ಆಕ್ಸಿಸ್ ಬ್ಯಾಂಕ್ ನ ಉಪಾಧ್ಯಕ್ಷರಾದ ಸುರೇಶ್ ರಾವ್, ಬ್ರಹ್ಮಾವರ ಜಿ.ಎಮ್ ವಿದ್ಯಾನಿಕೇತನದ ಪ್ರಕಾಶ್ ಚಂದ್ರ ಶೆಟ್ಟಿ ಮುಂತಾದ ಹಲವು ಗಣ್ಯ-ಮಾನ್ಯರ ಘನ ಉಪಸ್ಥಿತಿಯಲ್ಲಿ ಈ ಯೋಜನೆಯ ಬಗ್ಗೆ ಸಮಾಜದ ಗಣ್ಯರಿಂದ ೧೦೮ ಚಿನ್ನದ ನಾಣ್ಯಗಳ ಸಮರ್ಪಣೆ ಹಾಗೂ ಶ್ರೀಗಳವರಿಗೆ ಪುಷ್ಪಾರ್ಚನೆಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಸೌರಮಾನ ಯುಗಾದಿಯ ನೂತನ ಕ್ರೋಧಿ ಸಂವತ್ಸರದ ಶುಭ ಸಂದೇಶವನ್ನು ಪರ್ಯಾಯ ಸ್ವಾಮಿಗಳು ನೀಡುವರು. ಶ್ರೀ ಕೃಷ್ಣನ ಎಲ್ಲಾ ಭಕ್ತಾದಿಗಳೂ, ಶ್ರೀಗಳವರ ಅಭಿಮಾನಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆ ತಿಳಿಸಿದೆ. ಸುವರ್ಣ ರಥಕ್ಕೆ ಚಿನ್ನದ ನಾಣ್ಯವನ್ನು ಸಮರ್ಪಿಸಲಿಚ್ಛಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ. 7676215242, 9880835626

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!