ಕೋಟ, ಏ.9: ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲ್ಲೆಬೆಟ್ಟು-ಐರೋಡಿ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ನಡೆಯಿತು. ವೇ.ಮೂ ಸೂರ್ಯನಾರಾಯಣ ಬಾಯರಿ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಧಾರ್ಮಿಕ ವಿಧಿವಿಧಾನದ ಭಾಗವಾಗಿ ಶ್ರೀ ದೇವರಿಗೆ ಕಲಾಶಕ್ತಿ ಹೋಮ ಮತ್ತು ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ವಾರ್ಷಿಕ ಕೆಂಡಜಾತ್ರೆ ವಿಶೇಷವಾದ ಹರಕೆಯ ಹಣ್ಣುಗೊನೆ ಸೇವೆ, ಅನ್ನಸಂತರ್ಪಣೆ ಸಂಪನ್ನಗೊಂಡಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಐರೋಡಿ ವಿಠಲ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶಿವರಾಮ್ ಶ್ರೀಯಾನ್, ಪ್ರಧಾನ ಪಾತ್ರಿ ಮುಕ್ತೇಸರ ಕರಿಯ ಮಡಿವಾಳ, ಉಪಾಧ್ಯಕ್ಷರಾದ ಶೇಖರ್ ಮಡಿವಾಳ, ಕಿರಣ್ ಮಡಿವಾಳ, ಶ್ರೀನಿವಾಸ ಕೆಪಿಟಿಸಿಎಲ್, ಶ್ರೀನಿವಾಸ ಪೂಜಾರಿ, ಜಗನ್ನಾಥ್ ಬಂಗೇರ, ನಟರಾಜ್ ಗಾಣಿಗ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂಪನ್ನ

ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂಪನ್ನ
Date: