Tuesday, February 25, 2025
Tuesday, February 25, 2025

ಕಲೆಯನ್ನು ವಿಮರ್ಶಾತ್ಮಕ ದೃಷಿಕೋನದಿಂದ ನೋಡಬೇಕು: ರಮೇಶ್ ರಾವ್

ಕಲೆಯನ್ನು ವಿಮರ್ಶಾತ್ಮಕ ದೃಷಿಕೋನದಿಂದ ನೋಡಬೇಕು: ರಮೇಶ್ ರಾವ್

Date:

ಮಣಿಪಾಲ, ಏ.7: ಪ್ರಸ್ತುತ ಕಾಲಘಟ್ಟದಲ್ಲಿ ಕಲಾ ವಿಮರ್ಶೆಯನ್ನು ಕಲಿಸುವ ಅಗತ್ಯವಿದೆ ಎಂದು ಹಿರಿಯ ಕಲಾವಿದ, ಕಲಾವಿದರ ವೇದಿಕೆ, ಉಡುಪಿಯ ಅಧ್ಯಕ್ಷರಾದ ರಮೇಶ್ ರಾವ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈಂಸ್ನ ಆಶ್ರಯದಲ್ಲಿ ನಡೆದ ‘ಚಿತ್ರ ಕಲೋಸ್’ ಒಂದು ದಿನದ ವಿಶೇಷ ಚಿತ್ರಕಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉತ್ತಮ ಕಲೆಗೂ ಜನಪ್ರಿಯ ಕಲೆಗೂ ವ್ಯತ್ಯಾಸವಿದೆ ಎಂದ ಅವರು ಉತ್ತಮ ಕಲೆ ಜನಪ್ರಿಯವಾಗದಿರಬಹುದು ಹಾಗೆಯೇ ಜನಪ್ರಿಯ ಕಲೆ ಉತ್ತಮವಾಗಿಲ್ಲದಿರುವ ಸಾಧ್ಯತೆಗಳಿವೆ. ಕಲೆಯನ್ನು ವಿಮರ್ಶಾತ್ಮಕ ದೃಷಿಕೋನದಿಂದ ನೋಡುವುದನ್ನು ಪ್ರತಿಯೊಬ್ಬರೂ ಕಲಿಯಬೇಕು. ಇಂತಹ ಬೋಧನೆಯ ಅವಶ್ಯಕತೆ ಖಂಡಿತ ಇದೆ ಎಂದು ಅಭಿಪ್ರಾಯಪಟ್ಟರು. ಸಂಗೀತವು ರಾಗ, ತಾಳ ಮತ್ತು ಲಯವನ್ನು ಹೊಂದಿರುವಂತೆ ದೃಶ್ಯ ಕಲೆಯು ರೇಖೆ, ರೂಪ ಮತ್ತು ಬಣ್ಣಗಳನ್ನು ಹೊಂದಿದೆ. ಕಲಾವಿದನಾಗುವುದು ಬಹು ಕಷ್ಟದ ಕೆಲಸ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮಾತ್ರ ಕಲಾವಿದರಾಗಬಹುದು ಎಂದು ರಮೇಶ್ ರಾವ್ ಹೇಳಿದರು. ಚಾರ್ಕೋಲ್ ಸ್ಕೆಚ್ ಬಿಡಿಸುವ ಮೂಲಕ ಅವರು ಚಿತ್ರಾ ಕಲೋಸ್ ಅನ್ನು ಉದ್ಘಾಟಿಸಿದರು.

ಕಾರ್ಯಾಗಾರವನ್ನು ನಡೆಸಿಕೊಟ್ಟ ಕಲಾವಿದ ಮತ್ತು ಕಲಾ ಪತ್ರಕರ್ತ ಪ್ರೊ.ನೇಮಿರಾಜ್ ಶೆಟ್ಟಿ ಅವರು ಲಿಯೊನಾರ್ಡೊ ವಿನ್ಸಿ, ವರ್ಮೀರ್, ಪಿಕಾಸೊ, ವ್ಯಾನ್ ಗಾಗ್, ಪಾಲ್ ಕ್ಲೀ, ಹೆನ್ರಿ ರೂಸೋ, ರವೀಂದ್ರನಾಥ ಟ್ಯಾಗೋರ್ ಮುಂತಾದ ಕಲಾವಿದರ ಹಲವಾರು ವರ್ಣಚಿತ್ರಗಳನ್ನು ವಿವರಿಸಿದರು. ಉತ್ತಮ ಚಿತ್ರವು ಹೊಸತನದಿಂದ ಕೂಡಿದ್ದು, ಸ್ಥೂಲ ಕಲ್ಪನೆಗಳನ್ನು ಮತ್ತು ಸೂಕ್ಷ್ಮ ವರ್ಣ ವಿನ್ಯಾಸವನ್ನು ಹೊಂದಿರುತ್ತದೆ ಎಂದರು. ಕಲಾವಿದ ಡಾ.ಜನಾರ್ದನ್ ಹಾವಂಜೆ ಮಾತನಾಡಿ, ಕಲೆಯು ಮನಸ್ಸಿನಲ್ಲಿ ಹುಟ್ಟುತ್ತದೆ ಮತ್ತು ಸೃಜನಶೀಲವಾಗಿ ಕ್ಯಾನ್ವಾಸ್‌ನಲ್ಲಿ ಪ್ರಕಟವಾಗುತ್ತದೆ ಎಂದರು. ಅವರು ಮ್ಯಾಗಜೀನ್ ಪೇಪರ್‌ಗಳನ್ನು ಬಳಸಿಕೊಂಡು ಅರ್ಥಪೂರ್ಣವಾದ ಕೊಲಾಜ್ ಅನ್ನು ಹೇಗೆ ರಚಿಸಬಹುದು ಎಂಬುದನ್ನು ಪ್ರದರ್ಶಿಸಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸಮಗ್ರ ದೃಷ್ಟಿಕೋನವನ್ನು ಹೊಂದಲು ಪೂರ್ವ ಮತ್ತು ಪಾಶ್ಚಿಮಾತ್ಯ ಕಲಾ ಸಂಪ್ರದಾಯಗಳನ್ನು ತಿಳಿದುಕೊಳ್ಳಬೇಕು ಎಂದರು. ಅಪರ್ಣಾ ಪರಮೇಶ್ವರನ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಮಣಿಪಾಲ ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!